ರಾಣೇಬೆನ್ನೂರು, ಜು.5- ಕೋವಿಡ್-19 ಸೋಂಕು ದೇಶದಾದ್ಯಂತ ದಿನೇ ದಿನೇ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ನಿನ್ನೆ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಜನತೆಯಲ್ಲಿ ಮನವಿ ಮಾಡಿದರು.
ಕೊರೊನಾ ವೈರಸ್ ಹರಡದಂತೆ ಎಚ್ಚರ ವಹಿಸಿದಲ್ಲಿ ರೋಗ ಉಲ್ಬಣಗೊಳ್ಳಲಾರದು. ಆ ದಿಶೆಯಲ್ಲಿ ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತವಾಗಿ ತಮ್ಮ, ತಮ್ಮ ಮನೆಯ, ರಾಜ್ಯದ ಜೊತೆಗೆ ದೇಶದ ಆರೋಗ್ಯ ಕಾಪಾಡಲು ಲಾಕ್ಡೌನ್ ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಪಕ್ಷದ ಮನವಿ : ಈ ಮಹಾಮಾರಿ ಹರಡದಂತೆ ತಡೆಗಟ್ಟಲು ಈ ನಿಯಮಗಳನ್ನು ನಾಗರಿಕರು ಅನುಸರಿಸಲೇಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿ.ಪಂ. ಉಪಾಧ್ಯಕ್ಷರಾದ ಗಿರಿಜಮ್ಮ ಬ್ಯಾಲದಹಳ್ಳಿ, ಸದಸ್ಯರಾದ ಏಕನಾಥ್ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ್, ಮುಖಂಡರಾದ ಪ್ರಕಾಶ್ ಜೈನ್, ಬಸವರಾಜ್ ಹುಚ್ಚಗೌಡರ್, ಮಧು ಕೋಳಿವಾಡ, ಹನುಮಂತಪ್ಪ ಬ್ಯಾಲದಹಳ್ಳಿ ಅವರುಗಳು ಮನವಿ ಮಾಡಿದ್ದಾರೆ.