ಹರಿಹರ, ಜು. 5- ಅಯ್ಯಪ್ಪ ಕಾಲೋನಿಯ ವ್ಯಕ್ತಿಯಲ್ಲಿ ಶನಿವಾರ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ರಾಮಚಂದ್ರಪ್ಪ ತಿಳಿಸಿದ್ದಾರೆ.
ಇಲ್ಲಿಯವರೆಗೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು 25 ಕೊರೊನಾ ಸೋಂಕು ತಗುಲಿದ ಪ್ರಕರಣಗಳು ಇದ್ದು, ಅದರಲ್ಲಿ 22 ಸೋಂಕಿತ ವ್ಯಕ್ತಿಗಳು ಗುಣಮುಖ ಹೊಂದಿದ್ದಾರೆ. ಉಳಿದ ಮೂವರಿಗೆ ಚಿಕಿತ್ಸೆ ನೀಡಲಾ ಗುತ್ತಿದೆ. ನಗರದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಜೊತೆಯಲ್ಲಿ ಸಂಪರ್ಕ ಹೊಂದಿದ್ದ ಕ್ವಾರಂಟೈನ್ ನಲ್ಲಿ ಇದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಹೇಳಿದರು.
ಸೋಂಕಿತ ವ್ಯಕ್ತಿಯ ಮನೆಯ ಮುಂದೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಹಾಕಲಾಗಿದೆ. ಇವರ ಸಂಪರ್ಕದಲ್ಲಿ ಇದ್ದ ಏಳು ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದರು.
ಈ ವೇಳೆ ದಾವಣಗೆರೆ ಸರ್ವೇಕ್ಷಣಾ ಅಧಿಕಾರಿ ಡಾ. ನಟರಾಜ್ ಡಾ. ಎಂ.ವಿ. ಹೊರಕೇರಿ ಹಾಜರಿದ್ದರು.