ಆನ್‍ಲೈನ್ ತರಗತಿ : ಎಐಡಿಎಸ್‍ಒ ಖಂಡನೆ

ದಾವಣಗೆರೆ, ಜು.2- ಶಾಲಾ ಮಕ್ಕಳಿಗೆ ಆನ್‍ಲೈ ನ್ ತರಗತಿ ನಡೆಸಲು ನೀಡಿರುವ ಸರ್ಕಾರದ ಆದೇಶ ವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿ ಖಂಡಿಸಿದೆ. 

ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವುದರ ಕುರಿತು ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿ ವರದಿ ಬರುವ ಮುನ್ನವೇ ತರಾತುರಿಯಲ್ಲಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ. ಆನ್ ಲೈನ್ ಶಿಕ್ಷಣವು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಅನೇಕ ತಜರ ಅಭಿಪ್ರಾಯವಾಗಿತ್ತು. ಪೋಷಕರು ಕೂಡ ಆನ್ ಲೈನ್ ಬೋಧನೆಯ ಬಗ್ಗೆ ಹಾಗೂ ಅದಕ್ಕಾಗಿ ಖಾಸಗಿ ವಿದ್ಯಾಸಂಸ್ಥೆಗಳು ವಸೂಲಿ ಮಾಡುವ ಶುಲ್ಕದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ನಮ್ಮ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಕನಿಷ್ಟ ವಿದ್ಯುತ್ ಶಕ್ತಿ, ಇಂಟರ್ನೆಟ್ ಸೌಲಭ್ಯ ವೂ ಇಲ್ಲದಿರುವ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಬಡ ವಿದ್ಯಾರ್ಥಿಗಳ ಪಾಲಿಗೆ ತಾರತಮ್ಯದ ನವ ಸ್ವರೂಪವಾಗುತ್ತದೆ ಎಂದು ಎಐಡಿಸ್‍ಓ ಆರೋಪಿಸಿದೆ.

ವಿಶ್ವ ಸಂಸ್ಥೆಯ ಶೈಕ್ಷಣಿಕ ಅಂಗ(ಯುನೆಸ್ಕೊ) ಸಹ ಆನ್‍ಲೈನ್ ಶಿಕ್ಷಣ, ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆಯನ್ನು ಉಲ್ಭಣಗೊಳಿಸಿದೆ ಎಂದು ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಬಗ್ಗೆ ಚಿಂತನೆ ನಡೆಸಲು ತಜ್ಞರ ಸಮಿತಿ ರಚಿಸಿತ್ತು. ಆದರೆ ಸಮಿತಿಯ ವರದಿ ಬರುವ ಮುನ್ನವೇ ಏಕಾಏಕಿ ಆನ್ ಲೈನ್ ತರಗತಿಗಳನ್ನು ನಡೆಸುವಂತೆ ಆದೇಶ ನೀಡಿರುವುದು ಅತ್ಯಂತ ಅಪ್ರಜಾತಾಂತ್ರಿಕ. ಇದು ಸಮಿತಿಯ ಸ್ವಾಯತ್ತತೆ ಮೇಲಿನ ಆಕ್ರಮಣವಾಗಿದೆ. ಈ ಆದೇಶ ನೀಡುವುದರ ಹಿಂದೆ ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆಯೇ ಎಂಬ ಪ್ರಶ್ನೆ ಏಳುತ್ತಿದೆ. ಈ ಕೂಡಲೇ ಈ ಅಪ್ರಜತಾಂತ್ರಿಕ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಎಐಡಿಎಸ್‍ಓ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸೌಮ್ಯ, ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

error: Content is protected !!