ಹೊನ್ನಾಳಿ ತಾ|| ಗ್ರಾ.ಪಂ.ಗೆ ಆಡಳಿತಾಧಿಕಾರಿಗಳ ನೇಮಕ

ಹೊನ್ನಾಳಿ, ಜು.2- ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ಅವಧಿ ಜೂನ್ 2020ರೊಳಗೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಗ್ರಾಮ ಪಂಚಾಯಿತಿಗಳಿಗೆ, ಹೊಸದಾಗಿ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬರುವವರೆಗೂ ದಿನನಿತ್ಯದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ಅಧಿನಿಯಮದ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ತಾಲ್ಲೂಕಿನ ಕುಂದೂರು, ಕೂಲಂಬಿ, ಕುಂಬಳೂರು ಗ್ರಾಮ ಪಂಚಾಯಿತಿಗಳಿಗೆ, ತಾಲ್ಲೂಕು ಪಂಚಾಯ್ತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರನ್ನು  ನೇಮಿಸಲಾಗಿದೆ. ಹಿರೇಗೋಣಿಗೆರೆ, ಬೇಲಿಮಲ್ಲೂರು, ಅರಕೆರೆ, ಮಾಸಡಿ ಗ್ರಾ.ಪಂ.ಗಳಿಗೆ ಹೊನ್ನಾಳಿ ಕೃಷಿ ಇಲಾಖೆ ಉಪನಿರ್ದೇಶಕರನ್ನು ನೇಮಿಸಲಾಗಿದೆ. ಬೆನಕನಹಳ್ಳಿ, ಕಮ್ಮಾರಗಟ್ಟೆ, ಬೀರಗೊಂಡನಹಳ್ಳಿ, ಕುಳಗಟ್ಟೆ, ಸಾಸ್ವೆಹಳ್ಳಿ, ರಾಂಪುರ ಗ್ರಾ.ಪಂ.ಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮುಕ್ತೇನಹಳ್ಳಿ, ಬನ್ನಿಕೋಡು, ಯಕ್ಕನಹಳ್ಳಿ, ತಿಮ್ಲಾಪುರ ಈ ಗ್ರಾ.ಪಂ. ಗಳಿಗೆ ಹೊನ್ನಾಳಿ ಕೆ.ಆರ್.ಐ.ಡಿ,  ಐಟಿಡಿ ಕಾರ್ಯಪಾಲಕ ಎಂಜಿನಿಯರ್ ಅವರನ್ನು  ನೇಮಿಸಲಾಗಿದೆ. ಹೊಸಹಳ್ಳಿ, ಕ್ಯಾಸಿನಕೆರೆ, ಹುಣಸಘಟ್ಟ, ಲಿಂಗಾಪುರ ಈ ಗ್ರಾ.ಪಂ.ಗಳಿಗೆ ಹೊನ್ನಾಳಿ ಯು.ಟಿ.ಪಿ-6 ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೇಮಿಸಲಾಗಿದೆ. 

ಎಚ್. ಕಡದಕಟ್ಟೆ, ಹನುಮಸಾಗರ, ಹೆಚ್. ಗೋಪಗೊಂಡನಹಳ್ಳಿ, ಹರಳಹಳ್ಳಿ ಗ್ರಾ.ಪಂ.ಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಿಸಲಾಗಿದೆ. ಸೊರ ಟೂರು, ಹತ್ತೂರು, ಅರಬಗಟ್ಟೆ, ಕತ್ತಿಗೆ ಗ್ರಾ.ಪಂ. ಗಳಿಗೆ ಕೃಷಿ ಇಲಾಖೆ  ಸಹಾಯಕ ಕೃಷಿ ನಿರ್ದೇಶ ಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

error: Content is protected !!