ದಾವಣಗೆರೆ, ಜೂ. 30- ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ನಷ್ಟ, ಸಾಲ ಬಾಧೆ ತಾಳಲಾರದೇ ಮನನೊಂದ ರೈತ ನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಿಕ್ಕತೊಗಲೇರಿ ಗ್ರಾಮದಲ್ಲಿ ಇಂದು ನಡೆದಿದೆ. ಕೃಷ್ಣಮೂರ್ತಿ (48) ಮೃತ ರೈತ. ಈತ ಬ್ಯಾಂಕ್ ಸೇರಿದಂತೆ ಇತರೆಡೆ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಲಾಕ್ ಡೌನ್ ಪರಿಣಾಮ ಬೆಳೆ ನಷ್ಟ ಅನುಭವಿಸಿದ್ದ ಎಂದು ಹೇಳಲಾಗುತ್ತಿದೆ. ಕಳೆದ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ.
December 24, 2024