ತೆಂಗುನಾರು ಉತ್ಪನ್ನ ತಯಾರಿಕಾ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ

ತೆಂಗುನಾರು ಉತ್ಪನ್ನ ತಯಾರಿಕಾ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ - Janathavaniದಾವಣಗೆರೆ, ಅ.1-  ತೆಂಗು ಬೆಳೆಗಾರರ ಹಿತಕಾಯುವ ದೃಷ್ಟಿಯಿಂದ ತೆಂಗು ಬೆಳೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ಕಾಯಿರ್ ಬೋರ್ಡ್ ವತಿಯಿಂದ ತೆಂಗು ನಾರಿನ ಉತ್ಪನ್ನಗಳ ತಯಾರಿಕಾ ತರಬೇತಿ ಕೇಂದ್ರ ಹಾಗೂ ಪ್ರದರ್ಶನ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.

ತೆಂಗು ನಾರಿನ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸುಧಿರ್ ಗಾರ್ಗ್‍ರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತೆಂಗು ನಾರಿನ ಅಭಿ ವೃದ್ದಿ ಮಂಡಳಿಯ ಅಧಿಕಾರಿಗ ಳೊಂದಿಗೆ ನಡೆದ ಸಭೆಯಲ್ಲಿ ಅವರು ಹೇಳಿದರು. 

ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಮೆಟ್ರಿಕ್ ಟನ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮೆಟ್ರಿಕ್ ಟನ್ ತೆಂಗು ಉತ್ಪನ್ನ ದೊರೆಯುತ್ತಿದ್ದು, ಇದನ್ನು ಪರಿಣಾಮ ಕಾರಿಯಾಗಿ ಬಳಸಿಕೊಂಡು ತೆಂಗು ಬೆಳೆಗಾರರನ್ನು ಸಬಲೀಕರಣ ಗೊಳಿ ಸುವ ಸಲುವಾಗಿ ಕಾರ್ಯೋನ್ಮುಖರಾಗು ವುದಾಗಿ ಸಂಸದರು ತಿಳಿಸಿದರು.  ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಚಿವಾಲಯದಿಂದ ತೆಂಗುನಾರು ಅಭಿವೃದ್ದಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳಿದ್ದು, ಈ ಯೋಜನೆಗಳನ್ನು ಬಳಸಿಕೊಂಡು ತೆಂಗು ನಾರಿನ ಉತ್ಪನ್ನಗಳನ್ನು ತಯಾರಿಸಲು ಸಹಕಾರ ಸಂಘಗಳು ಹಾಗೂ ವೈಯಕ್ತಿಕ ಉದ್ದಿಮೆದಾರರು ಮುಂದಾಗಬಹು ದಾಗಿದೆ.  ಸರ್ಕಾರದಿಂದ ಶೇಕಡ 90 ರಷ್ಟು ಧನ ಸಹಾಯ ದೊರೆಯಲಿದ್ದು, ಉದ್ದಿಮೆದಾರರು ಶೇಕಡ 10 ರಷ್ಟು ಬಂಡವಾಳ ತೊಡಗಿಸಿ, ತೆಂಗು ನಾರಿನ ಉತ್ಪನ್ನಗಳ ತಯಾರಿಕಾ ಘಟಕ ಪ್ರಾರಂಭಿಸಬಹುದಾಗಿದೆ ಎಂದರು.

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಕೇಂದ್ರವನ್ನಾಗಿಸಿಕೊಂಡು ಕಾಯಿರ್ ಕ್ಲಸ್ಟರ್ ರಚನೆ ಮಾಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ರಸ್ತೆ ನಿರ್ಮಾಣದಲ್ಲಿಯೂ ಸಹ ಈಗ ತೆಂಗು ನಾರಿನ ಉತ್ಪನ್ನವನ್ನು ಬಳಸಲು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣದ ವೇಳೆ ಕಾಂಕ್ರೀಟ್‍ಗೆ ಪರ್ಯಾಯವಾಗಿ ನಾರನ್ನು ಬಳಸಲು ಆದ್ಯತೆ ನೀಡಲಾಗುವುದು. ಈ ರೀತಿ ನಿರ್ಮಾಣ ಮಾಡಿದ ರಸ್ತೆಗಳು ಕಾಂಕ್ರೀಟ್‍ಗಿಂತ ಐದು ಪಟ್ಟು ಹೆಚ್ಚು ಬಾಳಿಕೆ ಬರಲಿದೆ ಎಂದರು. 

ಸಭೆಯಲ್ಲಿ ತೆಂಗು ನಾರು ಅಭಿವೃದ್ದಿ ಮಂಡಳಿಯ ಜಂಟಿ ನಿರ್ದೇಶಕ ಎಂ. ಕೃಷ್ಣ, ನಿವೃತ್ತ ಜಂಟಿ ನಿರ್ದೇಶಕ ಸುಧಾಕರನ್ ಪಿಳ್ಳೆ, ಹಾಗೂ ಬೆಂಗಳೂರು ವಲಯ ಕಛೇರಿಯ ಹೆನ್ರಿ ಥಾಮಸ್ ಉಪಸ್ಥಿತರಿದ್ದರು.

error: Content is protected !!