ದಾವಣಗೆರೆ, ಜೂ.27- ತನ್ನನ್ನು ಕೆಲಸ ಸಿಕ್ಕಿದ ಮೇಲೆ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ವರ್ಷ ಕಳೆ ದರೂ ತನ್ನ ಪತಿ ಇನ್ನೂ ಬಂದಿಲ್ಲ. ಮತ್ತೊಂದು ಮದುವೆ ಯಾಗಿ ನನ್ನ ಮತ್ತು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ನಮಗೆ ರಕ್ಷಣೆಯೇ ಇಲ್ಲದಂತಾಗಿದ್ದು, ನ್ಯಾಯ ಸಿಗಬೇಕಿದೆ ಎಂದು ಬಸವಾಪಟ್ಟಣದ ನೊಂದ ಮಹಿಳೆ ನೀಲಮ್ಮ ತನ್ನಿಬ್ಬರು ಪುಟ್ಟ ಮಕ್ಕಳ ಸಮೇತ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.
ಕೆಲಸಕ್ಕಾಗಿ ವಿಷ ಕುಡಿಯಲು ಯತ್ನಿಸಿ ಜಿಲ್ಲಾಧಿಕಾರಿಗ ಳಿಂದ ಬುದ್ದಿವಾದ ಹೇಳಿಸಿಕೊಂಡಿದ್ದ ಪತಿ ನಿಂಗರಾಜ್ನೊಂ ದಿಗೆ 2014ರಲ್ಲಿ ನನ್ನ ವಿವಾಹ ನಡೆದಿತ್ತು. ಆ ವೇಳೆ 2 ಲಕ್ಷ ರೂ., 4 ತೊಲ ಬಂಗಾರ ನೀಡಿ ನಮ್ಮ ತಂದೆ ಮದುವೆ ಮಾಡಿಕೊಟ್ಟಿದ್ದರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಪತಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ. ಗಂಡನ ಮನೆಗೆ ಹೋದರೆ ಅಲ್ಲಿ ಕೂಡ ಮನೆ ಬಾಗಿಲು ಹಾಕಿಕೊಂಡು ಹೋಗಿದ್ದರು. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ರೈತ ಮುಖಂಡರೋರ್ವರು ನ್ಯಾಯ ಕೊಡಿಸುತ್ತೇವೆ ಎಂದು ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನಗೆ ನ್ಯಾಯ ಸಿಗದಂತಾಗಿದೆ ಎಂದು ನೋವು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಇದ್ದರು.