ದಾವಣಗೆರೆ, ಜೂ.28- ಶ್ರೀ ಕ್ಷೇತ್ರ ಬಿದ್ದಹನುಮಪ್ಪನ ಮಟ್ಟಿ ಕಂಚಿಕೆರೆ ಗುರುಗಳಾದ ಶ್ರೀ ಬಸವರಾಜ ಗುರೂಜಿ ಸಾನ್ನಿಧ್ಯದಲ್ಲಿ ನಗರದ ಶಿವಕುಮಾರಸ್ವಾಮಿ ಬಡಾವಣೆಯ ಈಶ್ವರ ಗಣಪತಿ ದೇವಸ್ಥಾನದ ಆವರಣ ಮತ್ತು 1ನೇ ಕ್ರಾಸ್ ಪಾರ್ಕ್ನಲ್ಲಿ `ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ’ ಕಾರ್ಯಕ್ರಮದಡಿ ಸಸಿಗಳನ್ನು ನೆಡಲಾಯಿತು.
ಬಿಲ್ವಪತ್ರೆ, ಬನ್ನಿ, ಅತ್ತಿ ಸೇರಿದಂತೆ ಅನೇಕ ರೀತಿಯ ಔಷಧೀಯ ಹಾಗೂ ಅಧ್ಯಾತ್ಮಿಕ ಮಹತ್ವವುಳ್ಳ ಸಸ್ಯಗಳನ್ನು ನೆಟ್ಟು, ಅದರ ಮುಂದೆ ಮಾಹಿತಿ ಫಲಕಗಳನ್ನು ಅಳವಡಿಸಲಾಯಿತು. ಶ್ರೀ ಬಸವರಾಜ್ ಗುರೂಜಿ ಮಾತನಾಡಿ, ವೇದಗಳಲ್ಲಿ 27 ನಕ್ಷತ್ರಗಳಿದ್ದು, ಪ್ರತಿಯೊಂದಕ್ಕೂ ಬೇರೆ, ಬೇರೆ ವೃಕ್ಷಗಳಿವೆ ಎಂದರಲ್ಲದೆ, ಸಂಪೂರ್ಣ ಮಾಹಿತಿ ನೀಡಿದರು. ಜುಲೈ 5ರ ಗುರು ಪೂರ್ಣಿಮೆಯಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಾನಗಳು ನೆರವೇರಲಿವೆ ಎಂದು ಮಾಹಿತಿ ನೀಡಿದರು.
ಪಾಲಿಕೆ ಉಪಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ, ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಬಡಾವಣೆಯಲ್ಲಿರುವ ಮರಗಳಿಗೆ ಒಂದೊಂದು ಹೆಸರಿನ ಫಲಕಗಳನ್ನು ಹಾಕುವ ಮೂಲಕ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನ ಮಟ್ಟಿ ಕಾರ್ಯದರ್ಶಿ ಕೆ. ಪ್ರಕಾಶ್, ಕೈದಾಳೆ ಶಿವಕುಮಾರ್, ರಾಜಶೇಖರ್, ನಾಗಪ್ಪ, ಪಾಲಿಕೆ ಸದಸ್ಯರು ಮಂಜಾನಾಯ್ಕ, ಸಂಗಪ್ಪ ತೋಟದ, ಸಂಗಮಾರಾಧ್ಯ, ವೀರಯ್ಯ, ಶಾಂತರಾಜ್, ಜಗದೀಶ್ ಕೋಗುಂಡಿ, ಗಂಗಾಧರ ಶಾಸ್ತ್ರಿ, ರಾಜಕುಮಾರ, ರುದ್ರಮ್ಮ ಮಲ್ಲಿಕಾರ್ಜುನ, ಶೋಭಾ ಬಸವರಾಜ್, ಧರಣೇಂದ್ರ, ಬಿ. ಸಂತೋಷ್ ಕುಮಾರ್, ಎನ್.ಜೆ. ಶಿವಕುಮಾರ್, ಪವನ್, ಜಯಪ್ಪ ಪಿ. ಅಣಜಿ ಇನ್ನಿತರರಿದ್ದರು.