ಕೊರೊನಾ ಚಿಕಿತ್ಸೆಗೆ ರಾಜ್ಯ ಸರ್ಕಾರವೇ ಹಣ ಭರಿಸಲಿ

ದಾವಣಗೆರೆ, ಜೂ.28- ಕೊರೊನಾ ಚಿಕಿತ್ಸೆಗೆ ರಾಜ್ಯ ಸರ್ಕಾರ ಹಣ ನಿಗದಿ ಮಾಡಿರುವುದು ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗಲಿದ್ದು, ರಾಜ್ಯ ಸರ್ಕಾರವೇ ಹಣ ಭರಿಸಬೇಕೆಂದು ಮಾಜಿ ನಗರಸಭೆ ಅಧ್ಯಕ್ಷ ಎಂ. ಮಂಜುನಾಥ್ ಆಗ್ರಹಿಸಿದ್ದಾರೆ.

ಈಗಾಗಲೇ ಜನತೆ ನಾಲ್ಕು ತಿಂಗಳ ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಚಿಕಿತ್ಸೆಗೆ ಹಣ ನಿಗದಿ ಮಾಡಿರುವುದು ಸರಿಯಲ್ಲ. ಸಾಮಾನ್ಯ ಜನರಿಗೆ  ಇದರಿಂದ ತೊಂದರೆಯಾಗಲಿದೆ. ಆಧಾರ್ ಕಾರ್ಡ್ ಮತ್ತು ಐಡಿ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದಲೇ ಚಿಕಿತ್ಸೆ ಭರಿಸಬೇಕಾಗಿದೆ.  ಸುಮಾರು ಮೂರು ತಿಂಗಳಿನಿಂದ ಸಾಮಾನ್ಯ ಜನರಿಗೆ ಆಹಾರದ ಕಿಟ್ ನೀಡಿದೆ. ಅಂತಹ ಜನರಲ್ಲಿ ಇಂದು ಕೊರೊನಾ ವೈರಸ್‌ಗೆ ಚಿಕಿತ್ಸೆಗಾಗಿ ಹಣ ನಿಗದಿ ಮಾಡಿರುವುದು ಎಷ್ಟು ಸರಿ? ಎಂದಿರುವ ಮಂಜುನಾಥ್ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು, ಅದೇ ಹಣ ಭರಿಸಬೇಕೆಂದು ಆಗ್ರಹಿಸಿದ್ದಾರೆ.

error: Content is protected !!