ಹರಪನಹಳ್ಳಿ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 3797 ವಿದ್ಯಾರ್ಥಿಗಳು

ಹರಪನಹಳ್ಳಿ, ಜೂ.23- ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಹರಪನಹಳ್ಳಿ ತಾಲ್ಲೂಕಿನಲ್ಲಿ  1915 ಗಂಡು, 1882 ಹೆಣ್ಣು  ಸೇರಿ ಒಟ್ಟು 3797 ವಿದ್ಯಾರ್ಥಿಗಳು  ನೋಂದಣಿ ಮಾಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ .ಎಂ.ವೀರಭದ್ರಯ್ಯ, ಹರಪನಹಳ್ಳಿ ಪಟ್ಟಣದಲ್ಲಿ ಸ.ಪ.ಪೂ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕೆಸಿಎ ಆಂಗ್ಲ ಮಾಧ್ಯಮ ಶಾಲೆ ಹೀಗೆ ಮೂರು ಕೇಂದ್ರಗಳು ಇವೆ.

ತಾಲ್ಲೂಕಿನ ಗೋವೇರಹಳ್ಳಿ, ಕಮ್ಮತ್ತಹಳ್ಳಿ, ಉಚ್ಚಂಗಿದುರ್ಗ, ಹಲುವಾಗಲು, ತೆಲಿಗಿ, ಅರಸಿಕೇರಿ, ಕಂಚಿಕೇರಿ, ನಜೀರ್ ನಗರ, ಮೈದೂರು, ಸಾಸ್ವಿಹಳ್ಳಿ ಹೀಗೆ 10 ಸೇರಿ ಒಟ್ಟು 13 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

error: Content is protected !!