ದಾವಣಗೆರೆ, ಜೂ.23 – ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ ಅವರು ಕ್ವಾರಂಟೈನ್ ಕೇಂದ್ರಗಳಾದ ನಿಸರ್ಗ ವಸತಿ ಗೃಹ, ಸವಣೂರು ವಸತಿ ಗೃಹ ಹಾಗೂ ಆವರಗೊಳ್ಳ – ಕಕ್ಕರಗೊಳ್ಳ ಮೊರಾರ್ಜಿ ದೇಸಾಯಿ ಶಾಲೆ, ಶ್ಯಾಗಲೆ ಸಮುದಾಯ ಭವನಕ್ಕೆ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು. ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಸ್ವಚ್ಚತೆ, ಊಟೋಪಚಾರ, ಮಾಸ್ಕ್, ಸ್ಯಾನಿಟೈಸರ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
January 23, 2025