ಹರಿಹರ : 3 ಕೊರೊನಾ ಪಾಸಿಟಿವ್

ಹರಿಹರ, ಜೂ.23- ನಗರದಲ್ಲಿ ಇಂದು ಮೂರು ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.  ನಗರದ ಶಿವಮೊಗ್ಗ ರಸ್ತೆಯಲ್ಲಿನ ಗರ್ಭಿಣಿ ಮಹಿಳೆಯ ಪತಿಗೆ ಮತ್ತು ಹರಪನಹಳ್ಳಿ ರಸ್ತೆಯ ಎ.ಕೆ ಕಾಲೋನಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಹರಡಿದೆ. 

ಮೂವರು ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ  ವ್ಯಕ್ತಿಗಳ ತಪಾಸಣೆ ನಡೆಸಲಾಗಿದೆ ಎಂದು ರಾಮಚಂದ್ರಪ್ಪ ಹೇಳಿದರು.

error: Content is protected !!