ಹೊನ್ನಾಳಿ, ಜೂ.20- ನಿದ್ರೆಗೆ ಜಾರಿದ್ದ ಗೃಹಿಣಿ ಯೋರ್ವರ ಕತ್ತಿನಲ್ಲಿದ್ದ 1. 71 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊನ್ನಾಳಿ ಟೌನ್ ದುರ್ಗಿಗುಡಿ ವಾಸಿ ಟಿ. ಸೌಮ್ಯ ಎಂಬುವರು ಮನೆಯಲ್ಲಿ ಈ ಘಟನೆ ನಡೆದಿದೆ. ಶಕೆಯಾದ ಕಾರಣ ಕಿಟಕಿ ಲಾಕ್ ಮಾಡದೇ ಮುಂದಕ್ಕೆ ಬಿಟ್ಟು ಮಲಗಿದ್ದಾಗ, ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳರು ಜೋರಾಗಿ ಎಳೆದು ಕಿತ್ತು ಕೊಳ್ಳುವ ಸಂದರ್ಭದಲ್ಲಿ ಎಚ್ಚರವಾಗಿ ಕಿರಚಿಕೊಂಡಿದ್ದಾರೆ. ಕಳ್ಳರು ಕುತ್ತಿಗೆಯಲ್ಲಿದ್ದ ಸರ ಕಟ್ಟು ಮಾಡಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.
December 23, 2024