ದಾವಣಗೆರೆ, ಜೂ. 20 – ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿನೂತನವಾಗಿ ವಿನ್ಯಾಸಗೊಳಿಸಿದ `ಆಕ್ಟೊಗಾನ್-2020 ಕಾರ್ನಿವಲ್ ಫಾರ್ ಯೂತ್’ ಯುವ ಜನೋತ್ಸವ ಸಮಾರೋಪಗೊಂಡಿತು.
ಬಾಗಲಕೋಟೆಯ ಬಸವೇಶ್ವರ ಕಾಮರ್ಸ್ ಕಾಲೇಜು ಚಾಂಪಿಯನ್ ಆಗಿ ಮತ್ತು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜ್ ಆಫ್ ಕಾಮರ್ಸ್ ತಂಡ 2ನೇ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಪ್ರಶಸ್ತಿ ಪ್ರದಾನ ಮಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ಉನ್ನತ ವ್ಯಾಸಂಗವು ಒಂದು ಒಳ್ಳೆಯ ಆಯ್ಕೆ ಎಂದರು.
ಯುವ ಜನೋತ್ಸವದಲ್ಲಿ ಪ್ರಧಾನ ಮಂತ್ರಿಯವರ ಕನಸಾದ `ಆತ್ಮ ನಿರ್ಭರ್ ಭಾರತ’ ಕೋವಿಡ್-19 ಆಧಾರದ ಮೇಲೆ ವಿವಿಧ ಸ್ಪರ್ಧೆಗಳನ್ನು ವಿನ್ಯಾಸಗೊಳಿಸಲಾಗಿತ್ತು.
`ವೋಕಲ್ ಫಾರ್ ಲೋಕಲ್’ ನಿಂದ ಹಿಡಿದು ಭವಿಷ್ಯದ ಭಾರತದ ಐದು ಆಧಾರ ಸ್ತಂಭಗಳಾದ ಅರ್ಥ ವ್ಯವಸ್ಥೆ, ಮೂಲಭೂತ ಸೌಕರ್ಯ, ಸಾಮಾಜಿಕ ವ್ಯವಸ್ಥೆ, ಚಲನಶೀಲ, ಜನತಂತ್ರ ಮತ್ತು ಬೇಡಿಕೆಗಳ ಆಧಾರದ ಮೇಲೆ 8 ವಿವಿಧ ಸ್ಪರ್ಧೆಗಳೇ ವಿದ್ಯಾರ್ಥಿಗಳು ವಿಡಿಯೋ, ರೇಡಿಯೋ, ಜಿಂಗಲ್, ಸೆಲ್ಫಿ, ಕೋಲ್ಯಾಬ್, ಲೋಗೋ ಮುಂತಾದವುಗಳನ್ನು ಮಾಡುವ ಮೂಲಕ ಭಾಗವಹಿಸಿದ್ದರು.
ವಿಜೇತ ತಂಡಗಳಿಗೆ ನಗದು ಬಹುಮಾನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಪ್ರೊ. ಕೆ.ಎಸ್. ವಿಜಯ್ ನಿರೂಪಿಸಿದರು. ಡಾ. ಪ್ರಕಾಶ್ ಎಸ್. ಅಳಲಗೆರೆ ವಂದಿಸಿದರು.