ಪಿಯುಸಿ ಇಂಗ್ಲಿಷ್ ಪರೀಕ್ಷೆ ಸುಗಮ

ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಗುಂಪು ಗುಂಪು, ಒಳಗಷ್ಟೇ ಅಂತರ : 15662 ವಿದ್ಯಾರ್ಥಿಗಳು ಹಾಜರು, 765 ಗೈರು

ದಾವಣಗೆರೆ, ಜೂ.18- ಕೊರೊನಾ ಆಂತಕದ ನಡುವೆಯೂ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಗರದಲ್ಲಿ ಇಂದು ಸುಗಮವಾಗಿ ನಡೆಯಿತು.

ಜಿಲ್ಲೆಯಿಂದ ಒಟ್ಟು 16427 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, 15662 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಹಾಗೂ 765 ವಿದ್ಯಾರ್ಥಿಗಳು ಗೈರಾಗಿದ್ದರು. 

ಬೆಳಿಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಂತೆ ವಿದ್ಯಾ ರ್ಥಿಗಳಿಗೆ ಮೊದಲೇ ಸೂಚಿಸಲಾಗಿತ್ತು. ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ  ಥರ್ಮಲ್ ಸ್ಕ್ಯಾನಿಂಗ್ ನಡೆಸಿ ಕೈಗಳಿಗೆ ಸ್ಯಾನಿಟೈಸರ್ ನೀಡಿ ಕೊಠಡಿಗೆ ಕಳುಹಿಸಲಾಯಿತು. 

ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲಾ 31 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷಾ ಅವಧಿಯಲ್ಲಿ 200 ಮೀಟರ್ ವ್ಯಾಪ್ತಿ ನಿಷೇಧಿತ ಪ್ರದೇಶವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.  ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಮೂರು ಗಂಟೆಗಳ ಕಾಲ ಪರೀಕ್ಷೆಯಲ್ಲಿ ಹೆಣಗಾಡಬೇಕಾಯಿತು. 

ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕಾಲೇಜುಗಳಲ್ಲಿ ಬೆಳಿಗ್ಗೆ 8.30 ಮತ್ತೆ ಕೆಲ ಕಾಲೇಜುಗಳಲ್ಲಿ 9 ಗಂಟೆಗೆ ಬರುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ವಿದ್ಯಾರ್ಥಿಗಳು ಬಂದಾಗ ಪರೀಕ್ಷಾ ಕೇಂದ್ರಗಳ ಬಾಗಿಲು ತೆರೆದಿರಲಿಲ್ಲ. ಗೇಟ್ ಬಳಿ ವಿದ್ಯಾರ್ಥಿಗಳು, ಪೋಷಕರು ಗುಂಪು ಗುಂಪಾಗಿ ಸೇರಿದ್ದರು. ನಂತರ ಗಡಿಬಿಡಿಯಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಒಳ ಬಿಡಲಾಯಿತು. ಈ ವೇಳೆ ಸಾಮಾಜಿಕ ಅಂತರ ಇರಲಿಲ್ಲ. ಪರೀಕ್ಷೆ ವೇಳೆ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳ ಲಾಗಿತ್ತು. ಪರೀಕ್ಷೆ ಮುಗಿದ ನಂತರ ಒಟ್ಟಿಗೆ ಹೊರ ಬಿಟ್ಟಾಗಲೂ ವಿದ್ಯಾರ್ಥಿ ಗಳು ಗುಂಪು ಗುಂಪಾಗಿಯೇ ತೆರಳಿದರು.

error: Content is protected !!