ದಾವಣಗೆರೆ, ಜೂ.18- ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಯಲ್ಲಿ ಸುಮಾರು 45 ಚೀಲದಷ್ಟು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಕಟಾವು ಮಾಡಿ ಆರ್ಥಿಕ ನಷ್ಟ ಹಾಗೂ ಮಾನಸಿಕ ತೊಂದರೆ ನೀಡಿರುವುದಾಗಿ ರೈತ ಮಹಿಳೆಯೋರ್ವರು ಐವರ ವಿರುದ್ಧ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾಗನೂರು ಗ್ರಾಮದ ರಿ.ಸ. ನಂ: 192 ಮತ್ತು 193ರ ಜಮೀನಿಗೆ ನಾನು ಮಾಲೀಕತ್ವ ಮತ್ತು 40 ವರ್ಷಗಳಿಂದ ಸ್ವಾಧೀನ ಹೊಂದಿದ್ದು, ಈ ಜಮೀನಿನಲ್ಲಿ ಬೇಸಿಗೆ ಬೆಳೆಯಾಗಿ ಸುಮಾರು 8 ಮಡಿಯಲ್ಲಿ ಭತ್ತದ ಬೆಳೆ ಬೆಳೆಯಲಾಗಿತ್ತು. ಭತ್ತದ ಬೆಳೆಯನ್ನು ಮಗನೊಂದಿಗೆ ಕಟಾವು ಮಾಡಲು ಹೋದಾಗ ನಾಗ ನೂರು ಗ್ರಾಮದ ಹನುಮಂತಪ್ಪ, ಹಿರಿ ಯವ್ವ, ಶ್ರೀಧರ, ಅಂಜಿ ಮತ್ತು ಹನು ಮಂತಪ್ಪನ ಅಣ್ಣನ ಹೆಂಡತಿ ಮತ್ತು ಇತ ರರು ಭತ್ತದ ಬೆಳೆ ಕಟಾವು ಮಾಡಲು ತೊಂ ದರೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಠಾಣೆಯ ಸಬ್ ಇನ್ ಸ್ಪೆಕ್ಟರ್ ಪ್ರಸಾದ್ ಅವರು ಯಾವುದೇ ಕಾರಣಕ್ಕೂ ಜಮೀನಿನಲ್ಲಿರುವ ಭತ್ತದ ಬೆಳೆಯನ್ನು ಯಾರೂ ಕಟಾವು ಮಾಡ ಬಾರದೆಂದು ಸೂಚಿಸಿದ್ದರು. ಆದರೂ ಸಹ ಎರಡು ಮಡಿಯಲ್ಲಿ ನಾನು ಬೆಳೆದಿ ರುವ ಭತ್ತದ ಬೆಳೆಯನ್ನು ಕಟಾವು ಮಾಡಿ ಕೊಂಡಿದ್ದಾರೆ. ಇದರಿಂದ ಆರ್ಥಿಕ ನಷ್ಟ ಹಾಗೂ ಮಾನಸಿಕವಾಗಿ ತೊಂದರೆಯಾ ಗಿದೆ. ಅಲ್ಲದೆ, ನಮಗೆ ನಮ್ಮ ಜಮೀನಿಗೆ ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಂಸಿಸಿ ಎ ಬ್ಲಾಕ್ ವಾಸಿ ಲಕ್ಷ್ಮಿದೇವಿ ಎಂಬ ರೈತ ಮಹಿಳೆ ಆರೋಪಿಸಿದ್ದಾರೆ.