3 ಪಾಸಿಟಿವ್ ದೃಢ ಇಬ್ಬರ ಬಿಡುಗಡೆ

ದಾವಣಗೆರೆ ಜೂ.17 – ಜಿಲ್ಲೆ ಯಲ್ಲಿ  ಬುಧವಾರ 3 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾ ಗಿದ್ದು, ಇಬ್ಬರು ಸಂಪೂರ್ಣ ಗುಣಮು ಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿ ಸಂಖ್ಯೆ 7575, 45 ವರ್ಷದ ಪುರುಷ ಇವರು ರೋಗಿ ಸಂಖ್ಯೆ 6575ರ ಸಂಪರ್ಕಿತರು. ರೋಗಿ ಸಂಖ್ಯೆ 7576, 50 ವರ್ಷದ ಪುರುಷ ಇವರು ಶೀತ ಜ್ವರದ (ಇನ್‍ಪ್ಲುಯೆಂಜಾ ಲೈಕ್ ಇಲ್‍ನೆಸ್) ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 7577, 20 ವರ್ಷದ ಯುವತಿ   ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿ ದ್ದಾರೆ. ರೋಗಿ ಸಂಖ್ಯೆ 6039 ಹಾಗೂ 6041 ಇವರು  ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚನ್ನಗಿರಿ ಮೂಲದ ಮಹಿಳೆ ಬಲಿ: 70 ವರ್ಷದ ಮಹಿಳೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಮೆಗ್ಗಾನ್ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮೂಲ ವ್ಯಾದಿ ಮತ್ತು ಶ್ವಾಸಕೋಶದ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು,  ಸಾವಿನ ನಂತರ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಮಹಿಳೆ ದಾವಣಗೆರೆಯ ಮಗಳ ಮನೆಗೆ ಹೋಗಿಬಂದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಪ್ರಕರಣವನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸಲಾಗಿದೆ.

error: Content is protected !!