ಚೀನಾ ವಿರುದ್ಧ ಯುದ್ಧ ಸಾರಲು ಪ್ರಧಾನಿಗೆ ರೈತ ಸಂಘದ ಶಾಸ್ತ್ರಿ ಮನವಿ

ದಾವಣಗೆರೆ, ಜೂ.17- ಜಗತ್ತಿಗೇ ಸಾಂಕ್ರಾಮಿಕ ವೈರಾಣು ಹರಡುವ ಮೂಲಕ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಶತ್ರು ರಾಷ್ಟ್ರ ಚೀನಾ ವಿರುದ್ಧ ಯುದ್ಧ ಸಾರಲು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್‌.ಕೆ ಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸಾಮ್ರಾಜ್ಯಗಳ ನೆಲಗಳನ್ನು ಕಬಳಿಸಲು ಚೀನಾ ಹಾತೊರೆಯುತ್ತಲೇ ಇದೆ. ಜಗತ್ತನ್ನೇ ನಾಶ ಮಾಡಿ ಪ್ರಪಂಚದ ದೊರೆ ಎನಿಸಿಕೊಳ್ಳಲು ಹೊರಟಿರುವ ಚೀನಾ ಅಧ್ಯಕ್ಷ ಜಿನ್‌ ಪಿಂಗ್‌ ದುರಾಡಳಿತವನ್ನು ಖಂಡಿಸಿದ್ದಾರೆ. ಕೊರೊನಾದಿಂದ 24 ಲಕ್ಷ ಜನ ಸಾವನ್ನಪ್ಪಿದ್ದು, 60 ಲಕ್ಷ ಜನ ಸೋಂಕಿತರಿದ್ದಾರೆ. ಲಕ್ಷಾಂತರ ಜನರ ಸಾವಿಗೆ ಕಾರಣರಾದ ಜಿನ್‌ ಪಿಂಗ್‌ಗೆ ಕರುಣೆ ತೋರದೆ ಯುದ್ದಕ್ಕೆ ಭಾರತ ಸಿದ್ಧವಾಗಬೇಕಿದೆ. 1962 ರಲ್ಲಿ ಕಬಳಿಸಿರುವ 8,500 ಚ. ಮೈಲಿ ಅಮೂಲ್ಯವಾದ ಹಿಮಾಲಯ ತಪ್ಪಲು ಪ್ರದೇಶವನ್ನು ವಾಪಸ್ಸು ಪಡೆಯಲು ಮನವಿ ಮಾಡಿದ್ದಾರೆ.

ಕೇಂದ್ರ ಒಪ್ಪಿದರೆ ಸೈನ್ಯಕ್ಕೆ ಆರ್ಥಿಕವಾಗಿ ನೆರವಾಗಲು ರೈತರು ತಲಾ 1,000 ರೂ.ಗಳ ಎನ್‌.ಎಸ್‌.ಸಿ ಬಾಂಡ್‌ಗಳನ್ನು ಕೇಂದ್ರ ಸರ್ಕಾರದ ಹೆಸರಿನಲ್ಲಿ ಖರೀದಿಸಲು ಸಿದ್ಧವಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.

error: Content is protected !!