ಮಾಜಿ ಶಾಸಕ ಶಿವಶಂಕರ್ ಕೊಲೆಗೆ ಸಂಚು !

ಮಾಜಿ ಶಾಸಕ ಶಿವಶಂಕರ್ ಕೊಲೆಗೆ ಸಂಚು ! - Janathavaniದಾವಣಗೆರೆ, ಜೂ. 15- ಹರಿಹರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರೂ, ಜೆಡಿಎಸ್ ಮುಖಂಡರೂ ಆದ ಎಚ್.ಎಸ್. ಶಿವಶಂಕರ್ ಅವರ ಕೊಲೆ ಸಂಚಿನ ಹಿಂದೆ ಸ್ವ ಪಕ್ಷದಲ್ಲಿದ್ದ ವ್ಯಕ್ತಿ ಸಂಚು ರೂಪಿಸಿರುವ ಬಗ್ಗೆ ಸ್ವತಃ ಶಿವಶಂಕರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಗುತ್ತಿಗೆದಾರ ಮಂಜುನಾಥ್ ಸೇರಿದಂತೆ ವಿನಯ್, ರಾಕೇಶ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟವರು ಪೊಲೀಸ್ ವಶದಲ್ಲಿದ್ದಾರೆನ್ನಲಾಗಿದೆ.

ಹರಿಹರ ಗ್ರೀನ್ ಸಿಟಿ ಕಳಪೆ ಕಾಮಗಾರಿ ವಿರುದ್ಧ ನಗರಸಭೆಗೆ ಶಿವಶಂಕರ್ ದೂರು ನೀಡಿದ್ದರು. ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ನಗರಸಭೆಯಲ್ಲಿ ಪರಾಭವಗೊಂಡಿದ್ದ ಮಂಜುನಾಥ್, ಈ ಬಗ್ಗೆ ಸೇಡು ತೀರಿಸಿಕೊಳ್ಳಲು ಶಿವಶಂಕರ್ ಕೊಲೆಗೆ ಜನವರಿಯಿಂದಲೇ ಸಂಚು ರೂಪಿಸಿದ್ದು, ಮಂಜುನಾಥ್ ಬೆಂಗಳೂರು ರೌಡಿಶೀಟರ್ ಸಂಪರ್ಕ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಕೊಲೆಗೆ ಸಂಚು ರೂಪಿಸುತ್ತಿದ್ದಾಗ ಪೊಲೀಸರ ವಶಕ್ಕೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶಿವಶಂಕರ್ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದು, ಗ್ರೀನ್ ಸಿಟಿ ಲೇಔಟ್ ಕಳಪೆ ಕಾಮಗಾರಿ ವಿರುದ್ದ, ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಕೊಲೆಗೆ ಸಂಚು ರೂಪಿಸಲಾಗಿದ್ದು, ಈಗಾಗಲೇ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಹರಿಹರ ಗ್ರೀನ್ ಸಿಟಿ ಅಭಿವೃದ್ಧಿಗೆ ಕಾಮಗಾರಿ  ಗುತ್ತಿಗೆ ಪಡೆದಿರುವ ಮಂಜುನಾಥ ಪರಿಚಿತನು. ಹಿಂದೆ ನಮ್ಮ ಪಕ್ಷದೊಂದಿಗೆ ಇದ್ದು ನಂತರ ಬೇರೆ ಪಕ್ಷ ಸೇರಿ ಚುನಾವಣೆ ನಡೆಸಿದ್ದ. ಗ್ರೀನ್ ಸಿಟಿಯ ಅಭಿವೃದ್ಧಿ ಬಗ್ಗೆ ನಾನು ಗಮನಿಸಿದಾಗ ಯಾವುದೇ ಇಲಾಖೆಗಳಿಂದ ಕಾನೂನು ಪ್ರಕಾರ ಅನುಮೋದನೆ ಪಡೆಯದೇ ಕಾಮಗಾರಿ ಕೈಗೊಂಡಿದ್ದರು. ಈ ಬಗ್ಗೆ ನಾನು ವಿವಿಧ ಇಲಾಖೆಗಳ ಗಮನ ಸೆಳೆದಾಗ ಕಾಮಗಾರಿಯನ್ನು ತಡೆಹಿಡಿಯಲಾಗಿತ್ತು. ಇದರಿಂದ ವಿಚಲಿತನಾಗಿ ಮಂಜುನಾಥ್, ನನ್ನ ಕೊಲೆ ಮಾಡಿದರೆ ಕಾಮಗಾರಿ ಕೆಲಸ ಸುಗಮವಾಗುವುದೆಂಬ ಉದ್ದೇಶದಿಂದ ಒಂದು ವಾರದ ಹಿಂದೆ ಸಂಚು ರೂಪಿಸಿದ್ದ ಎಂದು ಶಿವಶಂಕರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಶಿವಶಂಕರ್ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದು, ಗ್ರೀನ್ ಸಿಟಿ ಲೇಔಟ್ ಕಳಪೆ ಕಾಮಗಾರಿ ವಿರುದ್ದ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಕೊಲೆಗೆ ಸಂಚು ರೂಪಿಸಲಾಗಿದ್ದು, ಈಗಾಗಲೇ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಹರಿಹರ ಗ್ರೀನ್ ಸಿಟಿ ಅಭಿವೃದ್ಧಿಗೆ ಕಾಮಗಾರಿ  ಗುತ್ತಿಗೆ ಪಡೆದಿರುವ ಮಂಜುನಾಥ ಪರಿಚಿತನು. ಹಿಂದೆ ನಮ್ಮ ಪಕ್ಷದೊಂದಿಗೆ ಇದ್ದು ನಂತರ ಬೇರೆ ಪಕ್ಷ ಸೇರಿ ಚುನಾವಣೆ ನಡೆಸಿದ್ದ. ಗ್ರೀನ್ ಸಿಟಿಯ ಅಭಿವೃದ್ಧಿ ಬಗ್ಗೆ ನಾನು ಗಮನಿಸಿದಾಗ ಯಾವುದೇ ಇಲಾಖೆಗಳಿಂದ ಕಾನೂನು ಪ್ರಕಾರ ಅನುಮೋದನೆ ಪಡೆಯದೇ ಕಾಮಗಾರಿ ಕೈಗೊಂಡಿ ದ್ದರು.  ಈ ಬಗ್ಗೆ ನಾನು ವಿವಿಧ ಇಲಾಖೆಗಳ ಗಮನ ಸೆಳೆದಾಗ ಕಾಮಗಾರಿಯನ್ನು ತಡೆಹಿಡಿ ಯಲಾಗಿತ್ತು. ಇದರಿಂದ ವಿಚಲಿತನಾಗಿ ಮಂಜುನಾಥ್, ನನ್ನ ಕೊಲೆ ಮಾಡಿದರೆ ಕಾಮಗಾರಿ ಕೆಲಸ ಸುಗಮವಾಗುವುದೆಂಬ ಉದ್ದೇಶದಿಂದ ಒಂದು ವಾರದ ಹಿಂದೆ ಸಂಚು ರೂಪಿಸಿದ್ದ ಎಂದು ಶಿವಶಂಕರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

error: Content is protected !!