ದಾವಣಗೆರೆ, ಜೂ.14- ನಮ್ಮೆಲ್ಲರ ಹಿತದೃಷ್ಟಿ ಯಿಂದ ಗಿಡ ನೆಟ್ಟು ಸಂರಕ್ಷಿಸುವ ಮನೋಭಾವವನ್ನು ಬೆಳೆಸಲು ಸಮರೋಪಾದಿಯಲ್ಲಿ ನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸಮಿತಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಮುಂದಾಗೋಣ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಕರೆ ನೀಡಿದ್ದಾರೆ.
ಟ್ರಸ್ಟ್‌ನಿಂದ ಪ್ರತಿ ವರ್ಷ 1100 ಗಿಡಗಳನ್ನು ನೆಟ್ಟು ಸಂರಕ್ಷಿಸಲಾಗುತ್ತಿದೆ. ತಮ್ಮ ತಮ್ಮ ಮನೆ ಮುಂದೆ ಗಿಡ ನೆಟ್ಟು ಸಂರಕ್ಷಿಸಲು ಮುಂದೆ ಬಂದರೆ ಜುಲೈ ತಿಂಗಳ ಕೊನೆವರೆಗೂ ಅತೀ ಹೆಚ್ಚಿನ ಗಿಡಗಳನ್ನು ನೆಡಲು ಟ್ರಸ್ಟ್ ಪ್ರಯತ್ನಿಸುತ್ತದೆ. ದಾವಣಗೆರೆಯಲ್ಲಿ 1,50,000 ವಾಹನಗಳಿದ್ದು, ಅವು ಬಿಡುವ ಕಾರ್ಬನ್ ಡೈ ಆಕ್ಸೈಡನ್ನು ತಡೆಹಿಡಿದು ಆಮ್ಲಜನಕವನ್ನು ನೀಡಲು ನಮಗೆ ಮರಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಿಡ ನೆಟ್ಟು ಪೋಷಿಸಬೇಕಿದೆ. ದಾವಣಗೆರೆಯನ್ನು ಹಚ್ಚ ಹಸಿರಾಗಿಸೋಣ ಎಂದು ಕರೆ ನೀಡಿದ್ದಾರೆ.
ಮನೆಯ ಮುಂದೆ ಗಿಡ ನೆಡಲು ಇಚ್ಛಿಸುವವರು ಲಿಂಗರಾಜು (95380 24422), ಸದಾನಂದ (63631 51534) ಇವರನ್ನು ಸಂಪರ್ಕಿಸಿ.