ಅವಶ್ಯಕ ಕಾಮಗಾರಿಗೆ ಮಾತ್ರ ಅಸ್ತು
ದಾವಣಗೆರೆ, ಜೂ. 14 – ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಉತ್ಪನ್ನ ವ್ಯಾಪಾರ ಹಾಗೂ ಸರಕು ಕುರಿತ ಸುಗ್ರೀವಾಜ್ಞೆಯಿಂದಾಗಿ ಎಪಿಎಂಸಿ ಮಾರು ಕಟ್ಟೆ ಆದಾಯಕ್ಕೆ ಹೊಡೆತ ಬಿದ್ದಿದ್ದು, ಇದು ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.
ಆದಾಯ ಕಡಿತದ ಹಿನ್ನೆಲೆಯಲ್ಲಿ ಆದಾಯದ ಮಿತಿಯೊಳಗೆ ಮಾತ್ರ ಅತ್ಯವಶ್ಯಕ ಕಾಮಗಾರಿ ಗಳನ್ನು ಕೈಗೊಳ್ಳುವ ಕುರಿತು ಪುನರ್ ಪರಿಶೀಲಿ ಸುವಂತೆ ಎಪಿಎಂಸಿಗಳಿಗೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ.
2020-21ರ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಆಡಳಿತಾತ್ಮಕ ಮಂಜೂರಾತಿ ಪಡೆದಿರುವ ಕಾಮಗಾರಿಗಳನ್ನು ಕೈಗೊಳ್ಳುವ ಮುಂಚೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ
ಎಂದು ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯಿಂದಾಗಿ ಹಾಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಹೊರತು ಪಡಿಸಿ ಉಳಿದ ಪ್ರದೇಶವನ್ನೂ ವ್ಯಾಪಾರಿ ವಲಯ ಎಂದು ನಿಗದಿ ಪಡಿಸಲಾಗಿದೆ. ಇಲ್ಲಿ ಜರುಗುವ ವ್ಯಾಪಾರ ವಹಿವಾಟಿಗೆ ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಇಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ ತರಕಾರಿಗಳ ಮೇಲೆ ವಿಧಿಸಲಾಗುತ್ತಿದ್ದ ಬಳಕೆದಾರ ಶುಲ್ಕವನ್ನು ಪಾವತಿಸುವುದರಿಂದಲೂ ರಾಜ್ಯ ಸರ್ಕಾರದ ವತಿಯಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಎಪಿಎಂಸಿಗಳಲ್ಲಿ ಸಂಗ್ರವಾಗಬ ಹುದಾದ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕದ ಆದಾಯ ಗಣನೀಯವಾಗಿ ಕಡಿಮೆ ಆಗುವ ಸಂಭವವಿದೆ. ಹೀಗಾದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರೈಸಲು ಆದಾಯ ಕೊರತೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡು ಕಾರ್ಯಾದೇಶ ನೀಡದೇ ಇರುವ ಪ್ರಕರ ಣಗಳಲ್ಲಿ, ಅಂತಹ ಕಾಮಗಾರಿಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಕಾಮಗಾರಿಗಳ ಅವಶ್ಯಕತೆ, ಸುಧಾ ರಣಾ ಕ್ರಮಗಳಿಂದಾಗಿ ಮಾರುಕಟ್ಟೆ ಶುಲ್ಕದಲ್ಲಿ ಆಗಬಹುದಾದ ಇಳಿಕೆ, ಸಮಿತಿಯಲ್ಲಿ ಪ್ರಸ್ತುತ ಇರುವ ಆದಾಯದ ಲಭ್ಯತೆ, ಮುಂದುವರೆದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಿತಿಗೆ ಅಗತ್ಯವಿರುವ ಮೊತ್ತ, ಸಮಿತಿಯು ಈಗಾಗಲೇ ಹೊಂದಿರುವ ಸಾಲ ಮರುಪಾವತಿಗೆ ಇರುವ ಅವಕಾಶ ಇತ್ಯಾದಿ ಪೂರಕ ಅಂಶಗಳನ್ನು ಸಮಿತಿ ಪರಿಶೀಲಿಸಿ ಆನಂತರವೇ ಅತ್ಯವಶ್ಯಕ ಕಾಮಗಾರಿಗೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ.
ಆರ್ಥಿಕ ಪರಿಸ್ಥಿತಿ ಹಾಗೂ ಸುಧಾರಣಾ ಕ್ರಮ ಗಳಿಂದಾಗಿ ಮಾರುಕಟ್ಟೆ ಸಮಿತಿಗಳ ಆದಾಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಪರಿ ಶೀಲಿಸದೇ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂಬ ಕಾರಣಕ್ಕಾಗಿ ಕಾಮಗಾರಿಗಳನ್ನು ಕೈಗೊಂಡು, ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆರ್ಥಿಕ ಸಮಸ್ಯೆ ಉಂಟಾದರೆ ಅದಕ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ನೇರ ಹೊಣೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾ ಗುವುದು ಎಂದು ಎಚ್ಚರಿಸಲಾಗಿದೆ. ಆದರೆ, ಈಗಾ ಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾ ದೇಶ ನೀಡಿರುವ ಕಾಮಗಾರಿಗಳಿಗೆ ಸುತ್ತೋಲೆಯ ನಿರ್ದೇ ಶನ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.