ಖರ್ಗೆ ಅವರಿಗೆ ಕೊಲೆ ಬೆದರಿಕೆ : ಖಂಡನೆ

ದುಷ್ಟರ ಬಂಧಿಸಿ ಶಿಕ್ಷೆಗೆ ಛಲವಾದಿ ಮಹಾಸಭಾ ಒತ್ತಾಯ

ದಾವಣಗೆರೆ, ಜೂ.12- ಮಾಜಿ ಕೇಂದ್ರ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದವರನ್ನು ತ್ವರಿತವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಛಲವಾದಿ ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ. 

ಖರ್ಗೆ ಅವರಿಗೆ ಅನಾಮಧೇಯ ಕರೆಯಿಂದ ಕೊಲೆ ಬೆದರಿಕೆ ಬರುತ್ತಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಸಭಾದ ಜಿಲ್ಲಾಧ್ಯಕ್ಷ ಎಸ್. ಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು. ಯಾವುದೇ ಸಮುದಾಯ, ಪಕ್ಷದ ಹಿರಿಯ ರಾಜಕಾರಣಿಗಳ ಅನುಭವ, ಸೇವೆ, ಮಾರ್ಗದರ್ಶನ ಸರ್ಕಾರಕ್ಕೆ ಅಗತ್ಯ. ಆದ್ದ ರಿಂದ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿ ರುವ ಪ್ರಕರಣವನ್ನು ವಿಶೇಷ ಪ್ರಕರಣ ವಾಗಿ ಪರಿಗಣಿಸಿ ದುಷ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಇದರ ಉದ್ದೇಶ, ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸ ವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.

ಸಭಾದ ಕಾರ್ಯಾಧ್ಯಕ್ಷ ಸಿ. ಜಯಪ್ಪ, ಮುಖಂಡರಾದ ಡಾ. ಜಗನ್ನಾಥ, ಬಸವನಾಳ್ ಹಾಲೇಶ್, ನವೀನ್, ಗಿರೀಶ್, ಮೋಹನ್, ಹನುಮಂತಪ್ಪ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!