ದಾವಣಗೆರೆ, ಜೂ.12- ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಿತಿಯಿಂದ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳ ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆಗೆ ಸಿದ್ಧತೆ ಮಾಡುವುದಾಗಿ ಸಮಿತಿಯ ಜಿಲ್ಲಾ ಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ತಿಳಿಸಿದರು.
ರಾಜ್ಯ ಸಮಿತಿಯ ಆದೇಶ ಮೇರೆಗೆ ಎಲ್ಲಾ 14 ಬ್ಲಾಕ್‍ಗಳ ಅಧ್ಯಕ್ಷರು ಕಡ್ಡಾಯ ವಾಗಿ ನಾಲ್ಕು ಕಡೆ ಪರಿಶಿಷ್ಟ ಕಾಲೋನಿ ಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಿಂದ ಒಟ್ಟು 56 ಈ ಕಾಲೋನಿಗಳಲ್ಲಿ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಸಬೇಕು ಎಂದು ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಡಿ.ಎಂ. ಈಶ್ವರಪ್ಪ, ಉಮಾಮಹೇಶ್ವರ, ಮುಖಂಡರಾದ ಬಸವನಾಳ್ ಹಾಲೇಶ್, ನೀಲಗಿರಿ ನಿಖಿಲ್, ಬಿ.ಎನ್. ರಂಗನಾಥ ಸ್ವಾಮಿ, ಜಿ. ರಾಕೇಶ್, ಅಂಜಿನಪ್ಪ, ಪರಶುರಾಮ್, ನಾಗರಾಜ ನಾಯ್ಕ, ಶಶಿ ಶಿರಮಗೊಂಡ ನಹಳ್ಳಿ ಸೇರಿದಂತೆ ಇತರರು ಇದ್ದರು.