ದಾವಣಗೆರೆ, ಜೂ.12- ಎರಡೂವರೆ ತಿಂಗಳ ಮಗು ಹಾಗೂ ತಾಯಿ ಸೇರಿ ಗುರುವಾರ ಮೂವರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಮನೆಗೆ ಮರಳಿದ್ದಾರೆ. ರೋಗಿ ಸಂಖ್ಯೆ 3638, 3640 ಹಾಗೂ 4339 ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ 223 ಕೊರೊನಾ ಪ್ರಕರಣಗಳಿದ್ದು, ಈ ಪೈಕಿ 171 ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿ ದ್ದಾರೆ. 6 ಸಾವು ಸಂಭವಿಸಿದ್ದು, ಒಟ್ಟು 46 ಸಕ್ರಿಯ ಪ್ರಕರಣಗಳಿವೆ.
January 24, 2025