30ರವರೆಗೆ ಬೆಂಬಲ ಬೆಲೆಯಡಿ ಖರೀದಿ

ದಾವಣಗೆರೆ, ಜೂ.11-  ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2019-20ನೇ ಸಾಲಿನ ಮುಂಗಾರಿನಲ್ಲಿ ಹಾಗೂ 2020-21ನೇ ಸಾಲಿನ ಹಿಂಗಾರಿನಲ್ಲಿ  ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ನೋಂದಾಯಿತ ಅಕ್ಕಿ ಗಿರಣಿಗಳ ಮೂಲಕ ಖರೀದಿ ಪ್ರಕ್ರಿಯೆ  ಜೂನ್ 30ರವರೆಗೆ ಮುಂದುವರೆಸಲಾಗಿದೆ.

ಖರೀದಿ ಪ್ರಕ್ರಿಯೆಯು ಮೇ 31 ರಂದು ಅಂತ್ಯಗೊಂಡಿದ್ದು, ಆದರೆ ಸರ್ಕಾರದ ಆದೇಶದ ಅನ್ವಯ ಜೂನ್ 15 ರವರೆಗೆ ಅರ್ಹ ರೈತರ ನೋಂದಣಿ ಕಾರ್ಯ ಹಾಗೂ ಜೂನ್ 30 ರವರೆಗೆ ಖರೀದಿ ಪ್ರಕ್ರಿಯೆ ಮುಂದುವರೆಸಲಾಗಿದೆ. ಹಾಗೂ ಬಿಳಿಜೋಳ ಮತ್ತು ರಾಗಿ ಖರೀದಿ ಪ್ರಕ್ರಿಯೆಯನ್ನು ಸಹ ಜೂನ್ 30 ರವರೆಗೆ ಮುಂದುವರೆಸಲಾಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ತಿರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ರೈತರಿಂದ ನೇರವಾಗಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿನ  ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ ರೈತರಿಗೆ ಸಮೀಪವಿರುವ ಅಕ್ಕಿ ಗಿರಣಿಗಳಲ್ಲಿ ಖರೀದಿಸಲಾಗುವುದು.

ದಾವಣಗೆರೆ ತಾಲ್ಲೂಕಿನ ರೈತರು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, ಹರಿಹರ ತಾಲ್ಲೂಕಿನ ರೈತರು ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ, ಹೊನ್ನಾಳಿ ತಾಲ್ಲೂಕಿನ ರೈತರು ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಖರಿದೀಸಬಹುದಾಗಿದ್ದು, ಜಿಲ್ಲೆಯ ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!