ಮಲೇಬೆನ್ನೂರು : 7 ವರದಿ ನೆಗೆಟಿವ್‌

ಮಲೇಬೆನ್ನೂರು, ಜೂ.10- ಪಟ್ಟಣದ ಗೌಸ್‌ ನಗರಕ್ಕೆ ಕೊರೊನಾ ಸೋಂಕಿತ ಪೊಲೀಸ್‌ ಪೇದೆಯೊಬ್ಬರು ಭೇಟಿ ನೀಡಿದ್ದ ಸಂಬಂಧಿಕರ ಮನೆಯ 7 ಜನರ ಕೋವಿಡ್‌ ಟೆಸ್ಟ್‌ ವರದಿ ಬುಧವಾರ ಬಂದಿದ್ದು, ಅವರ ವರದಿಯೂ ನೆಗೆಟಿವ್ ಆಗಿದೆ.

ಒಟ್ಟು 14 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ತೆಗೆದುಕೊ ಳ್ಳಲಾಗಿತ್ತು. ಆ ಪೈಕಿ 7 ಜನರ ವರದಿ ನಿನ್ನೆ ನೆಗೆಟಿವ್‌ ಬಂದಿತ್ತು. ಬಾಕಿ 7 ಜನರ ವರದಿ  ಇಂದು ನೆಗೆಟಿವ್‌ ಬಂದಿರುವುದರಿಂದ ಪಟ್ಟಣದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

error: Content is protected !!