ಲಂಬಾಣಿ ಯುವಕನ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ

ದಾವಣಗೆರೆ, ಜೂ.8- ಇಲ್ಲಿನ ಶೇಖರಪ್ಪ ನಗರದ ಲಂಬಾಣಿ ಜನಾಂಗದ ಯುವಕ ಶ್ರೀಕಾಂತ್‌ ನಾಯ್ಕ ಅವರ ಮೇಲೆ ಒಂದು ವಾರದ ಹಿಂದೆ ಕೆಲವರು ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿದವರನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷರೂ ಆದ ಮಾಜಿ ಶಾಸಕ ಎಂ. ಬಸವರಾಜನಾಯ್ಕ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಡಿಸಿದರು.

ಮನೆ ಮನೆಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ನಾನು ಬಡವನಿದ್ದು ತಂದೆ ಆಟೋ ಓಡಿಸುತ್ತಿದ್ದೇನೆ. ನನ್ನ ಎಡಗಾಲು ಮೂಳೆ ಮುರಿದಿದ್ದು ರಾಡ್‌ ಹಾಕಿದ್ದಾರೆ, ಓಡಾಡಲೂ ಆಗುತ್ತಿಲ್ಲ. ಆದ್ದರಿಂದ ಆಹಾರದ ಕಿಟ್‌ ನೀಡಿ ಎಂದು ಬೇಡಿಕೊಂಡರೂ ಆಹಾರದ ಕಿಟ್‌ ನೀಡಲಿಲ್ಲ ಎಂದು ಅವರು ಹೇಳಿದರು.

ಆಹಾರದ ಕಿಟ್‌ ಕೇಳಿದ್ದಕ್ಕೆ ಜಾತಿ ನಿಂದನೆ ಮಾಡಿದ ಗುಂಪು ವಿನಾಕಾರಣ ಶ್ರೀಕಾಂತ್‌ ಮೇಲೆ ಹಲ್ಲೆ ನಡೆಸಿ, ನಿನಗ್ಯಾಕೆ ಆಹಾರದ ಕಿಟ್‌ ಕೊಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಲಗಾಲಿನ ಮೇಲೆ ಇಟ್ಟಿಗೆಯನ್ನು ಎತ್ತಿ ಹಾಕಿದರು. ಈಗಾಗಲೇ ಆತನ ಎಡಗಾಲು ಮುರಿದು ಕುಂಟುತ್ತಿದ್ದು, ಈಗ ಬಲಗಾಲಿಗೂ ಜಖಂ ಆಗಿ ಓಡಾಡದ ಸ್ಥಿತಿಗೆ ತಂದಿದ್ದಾರೆ ಎಂದು ಅವರು ವಿವರಿಸಿದರು.

ಶ್ರೀಕಾಂತ್‌ ಮೇಲೆ ಹಲ್ಲೆ ನಡೆಸಿದ ಅಲ್ಲಾಭಕ್ಷ್, ಆಸೀಫ್, ಮಹಮ್ಮದ್ ಫಾರೂಕ್ ಮತ್ತಿತರರನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದರೆ ಬಂ ಜಾರ ಸಮಾಜದವರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯರಾದ ಮಂಜುನಾಥ ನಾಯ್ಕ, ಶ್ರೀಮತಿ ಜಯಮ್ಮ ಗೋಪಿನಾಥ್‌, ಪ್ರಭು ಕಲ್ಬುರ್ಗಿ, ಲಿಂಗರಾಜ ನಾಯ್ಕ, ಉಮೇಶನಾಯ್ಕ ಮತ್ತಿತರರಿದ್ದರು.

error: Content is protected !!