ಹಿಂಬಾಗಿಲ ರಾಜಕಾರಣದ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದಲ್ಲ

ರೇಣುಕಾಚಾರ್ಯಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ತಿರುಗೇಟು

ದಾವಣಗೆರೆ, ಜೂ. 6- ಹಿಂಬಾಗಿಲ ರಾಜಕಾರಣ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಅವರು  ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ರೇಣುಕಾಚಾರ್ಯ ಅವರು ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರುಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ.  ಸಿದ್ದರಾಮಯ್ಯ ಅವರು 5 ವರ್ಷ ಸುಭದ್ರ ಆಡಳಿತ ನಡೆಸಿದ್ದಾರೆ. ರೈತರಿಗೆ ತೊಂದರೆ ಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿದ್ದಾರೆ.  ಅಂತವರ ಬಗ್ಗೆ ಮಾತನಾಡುವ ಅರ್ಹತೆ ರೇಣುಕಾಚಾರ್ಯ ಅವರಿಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

 ಸಿಎಂ ರಾಜಕೀಯ ಕಾರ್ಯದರ್ಶಿಯ ಅಧಿಕಾರವನ್ನು ರೇಣುಕಾಚಾರ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಎಸ್ಕಾರ್ಟ್ ಬಳಸಿ ಸರ್ಕಾರದ ಹಣ ದುರುಪಯೋಗ ಮಾಡಿದ್ದಾರೆ. ಅಜೆಂಡಾ ಇಲ್ಲದ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಜನರ ದುರಂತ ಎಂದು  ವ್ಯಂಗ್ಯವಾಡಿದರು.

ಕಾಂಗ್ರೆಸ್ ಮುಖಂಡ ದಿನೇಶ್ ಕೆ. ಶೆಟ್ಟಿ ಮಾತನಾಡಿ, ನಗರ ಪಾಲಿಕೆಯಲ್ಲಿ ಈ ಮೊದ ಲಿನಂತೆ ತೆರಿಗೆ ಪಾವತಿಗೆ ಅನುವು ಮಾಡ ಬೇಕು. ಇದರಿಂದ ಜನರಿಗೆ ಹೊರೆಯಾಗು ವುದು ತಪ್ಪಿದಂತಾಗುತ್ತದೆ. ಮೇಯರ್ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ. ಆದರೂ ಸಹ ಅನುಭವವಿಲ್ಲದ ಕಾರಣ ಪಾಲಿಕೆ ಆಡಳಿತದಲ್ಲಿ ವಿಫಲರಾಗುತ್ತಿದ್ದಾರೆ. ಟ್ರೇಡ್ ಲೈಸೆನ್ಸ್ ಸೇರಿದಂತೆ ಪಾಲಿಕೆಯಲ್ಲಿ ಎಲ್ಲಾ ಆಡ ಳಿತ ಗೊಂದಲದಲ್ಲಿದೆ ಎಂದು ಆರೋಪಿಸಿದರು. 

ಕಳೆದ ಮೂರು ತಿಂಗಳಿನಿಂದ ಯಾವುದೇ ವ್ಯವಹಾರಗಳು ನಡೆಯದೇ ವರ್ತಕರು ಕಷ್ಟದಲ್ಲಿದ್ದಾರೆ. ಆದ್ದರಿಂದ ತೆರಿಗೆ ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿದರಲ್ಲದೇ, ರೈತರು ಕಷ್ಟದಲ್ಲಿದ್ದಾರೆ. ಭತ್ತಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ. ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸಬೇಕು. ರೈತರ ತಾಳ್ಮೆ ಪರೀಕ್ಷಿಸಬಾರದು. ರಾಜಕೀಯ ದೊಂಬ ರಾಟ ನಿಲ್ಲಿಸಿ ಮೊದಲು ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಎ ನಾಗರಾಜ್, ಅನಿತಾಬಾಯಿ, ಅಯೂಬ್ ಪೈಲ್ವಾನ್, ಆಶಾ ಮುರಳಿ ಇದ್ದರು.

error: Content is protected !!