ಎಸ್ಸೆಸ್ ಹೈಟೆಕ್ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮೇಯರ್‌ಗೆ ಒತ್ತಾಯ

ದಾವಣಗೆರೆ, ಜೂ.6- ನಗರದ ಎಸ್.ಎಸ್. ಹೈಟೆಕ್ ಬಡಾವಣೆಯಲ್ಲಿ ಸುಮಾರು 70 ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಉತ್ತರ ವಲಯ ಶಾಸಕರ ಹಾಗೂ ಮಹಾನಗರ ಪಾಲಿಕೆ ಮೇಯರ್ ಅವರಿಗೆ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.

ಕಸ ವಿಲೇವಾರಿಗೆ ವಾಹನ ವ್ಯವಸ್ಥೆ, ಕುಡಿಯುವ ನೀರು ಸರಬರಾಜು, ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ, ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸು ವುದು, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಕೆಟ್ಟಿರುವ ಎಲೆಕ್ಟ್ರಿಕಲ್ ಟ್ರಾನ್ಸ್‌ಫಾರ್ಮರ್‌ ಗಳನ್ನು ಚಾರ್ಚ್ ಮಾಡಿಸುವುದು, ಬೀದಿ ದೀಪಗಳ ಅಳವಡಿಕೆ, ಬಡಾವ ಣೆಯಲ್ಲಿ ಒಳಚರಂಡಿ ವ್ಯವಸ್ಥೆ, ಎಸ್.ಎಸ್. ಹೈಟೆಕ್ ಬಡಾವಣೆ ಹಾಗೂ ಭೂಮಿಕಾ ನಗರದ ನಡುವೆ ಹರಿಯುವ ಹಳ್ಳವನ್ನು ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು, ಸಿ.ಸಿ. ಕ್ಯಾಮರಾ ಅಳವಡಿಕೆ, ನಾಮಫಲಕ ಅಳವಡಿಕೆ, ಸಿಟಿ ಬಸ್ ನಿಲ್ದಾಣ ಹಾಗೂ ರಸ್ತೆಗಳಿಗೆ ನಾಮಫಲಕ ಅಳವಡಿಸುವಂತೆ ಕೋರಿ ಮನವಿ ಮಾಡಲಾಗಿದೆ.

error: Content is protected !!