ದಾವಣಗೆರೆ, ಜೂ 3 – 2019-20 ನೇ ಮುಂಗಾರು ಹಾಗೂ 2020-21 ನೇ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಪ್ರಕ್ರಿಯೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.
ಮುಂಗಾರು ಋತುವಿನಲ್ಲಿ ಖರೀದಿಸಲಾಗುವ ಭತ್ತವನ್ನು ಹಲ್ಲಿಂಗ್ ಮಾಡಿ ಅಕ್ಕಿಯನ್ನು ಸರಬರಾಜು ಮಾಡುವ ಅವಧಿಯು 30-08-2020 ಹಾಗೂ 2020-21 ನೇ ಸಾಲಿನ ಹಿಂಗಾರು ಋತುವಿನಲ್ಲಿ ಖರೀದಿಸಲಾಗುವ ಭತ್ತವನ್ನು ಹಲ್ಲಿಂಗ್ ಮಾಡಿ ಅಕ್ಕಿಯನ್ನು ಸರಬರಾಜು ಮಾಡುವ ಅವಧಿಯು 30-09-2020 ಆಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕೋವಿಡ್ 19 ಹರಡುವಿಕೆ ಹಿನ್ನೆಲೆ ಯಲ್ಲಿನ ಲಾಕ್‍ಡೌನ್ ನಿಯಮಗಳುನುಸಾರ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡುವುದು. ಸಂಗ್ರಹಣಾ ಕೇಂದ್ರದಲ್ಲಿ ಜನಜಂಗುಳಿ ಉಂಟಾಗದಂತೆ ನೋಡಿಕೊಳ್ಳ ಲು ನಿರ್ದಿಷ್ಟ ಸಂಖ್ಯೆಯ ರೈತರಿಗೆ ಮಾತ್ರ ಅವ ಕಾಶ ನೀಡುವುದು. ಸಂಗ್ರಹಣಾ ಕೇಂದ್ರದಿಂದ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಕೈಗಳನ್ನು ಸ್ಯಾನಿಟೈಸರ್‍ನಿಂದ ಸ್ವಚ್ಚಗೊಳಿಸತಕ್ಕದ್ದು ಮತ್ತು ಮಾಸ್ಕನ್ನು ಕಡ್ಡಾಯವಾಗಿ ಧರಿಸತಕ್ಕದ್ದು.
ಕೋವಿಡ್-19 ಹರಡುವಿಕೆ ಯನ್ನು ತಡೆಗಟ್ಟುವ ಬಗ್ಗೆ ಕೇಂದ್ರ/ರಾಜ್ಯ ಸರ್ಕಾರವು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪ್ರಕಟಣೆ ತಿಳಿಸಿದೆ.