ಕೆನರಾ ಬ್ಯಾಂಕಿನಿಂದ ಆಭರಣಗಳ ಮೇಲೆ ಸಾಲ ಯೋಜನೆ

ದಾವಣಗೆರೆ, ಜೂ.3- ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರ್ಥಿಕ ಉತ್ತೇಜನ ನೀಡಲು ಕೆನರಾ ಬ್ಯಾಂಕ್‌ನಿಂದ ಸಾರ್ವಜನಿಕರಿಗೆ ಚಿನ್ನದ ಆಭರಣಗಳ ಮೇಲೆ ಅತೀ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ಇನ್ನಿತರೆ ವಾಣಿಜ್ಯ ಉದ್ದೇಶಗಳಿಗಾಗಿ ವಿಶೇಷ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕೆನರಾ ಬ್ಯಾಂಕ್‌ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ಹೆಚ್. ರಘುರಾಜ್ ತಿಳಿಸಿದ್ದಾರೆ.

ಈ ವಿಶೇಷ ಸಾಲ ಯೋಜನೆಯು ಬರುವ ಸೆಪ್ಟೆಂಬರ್ 30 ರವರೆಗೆ  ಜಾರಿಯಲ್ಲಿರಲಿದ್ದು, ಗ್ರಾಹಕರಿಗೆ ಗರಿಷ್ಠ 20 ಲಕ್ಷ ರೂಪಾಯಿಗಳ ಸಾಲ ವನ್ನು ಪಡೆಯಲು ಅವಕಾಶವಿದೆ. ವಾರ್ಷಿಕ  ಶೇ. 7.85 (ಮಾಸಿಕ 65 ಪೈಸೆ)ಬಡ್ಡಿಯನ್ನು ವಿಧಿಸಲಾಗುವ ಸಾಲವನ್ನು ಅತ್ಯಂತ ತ್ವರಿತವಾಗಿ ಕೆನರಾ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿ ನೀಡಲಾಗುವುದು. ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂ ಚಿನ್ನಕ್ಕೆ ಮಾರುಕಟ್ಟೆ ದರದ ಆಧಾರದ ಮೇಲೆ ಅತ್ಯಂತ ಗರಿಷ್ಠ ಪ್ರಮಾಣದ ಸಾಲ ನೀಡಲಾಗುವುದು ಎಂದು ವಿವರಿಸಿದ್ದಾರೆ.

ಈ ಯೋಜನೆಯಲ್ಲಿ 1 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡುವುದರ ಮೂಲಕ ಕೆನರಾ ಬ್ಯಾಂಕ್ ಸಾರ್ವಜನಿಕರಿಗೆ ಮತ್ತು ತನ್ನ ಗ್ರಾಹಕರಿಗೆ ಆರ್ಥಿಕ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿವರಕ್ಕೆ ಮೊ: 9448288945, 08192-223134, 08192-223138ರಲ್ಲಿ ಸಂಪರ್ಕಿಸಬಹುದು.

error: Content is protected !!