ದಾವಣಗೆರೆ,ಜೂ.2- ಮಹಾನಗರ ಪಾಲಿಕೆಯು ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಏರಿಕೆ ಮಾಡಿರುವ ಕಂದಾಯವನ್ನು ರದ್ದು ಮಾಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೆಚ್ಚಿಸಿರುವ ಕಂದಾಯವನ್ನು ರದ್ದುಪಡಿಸುವುದಲ್ಲದೇ, ಪ್ರಸ್ತುತ ಇರುವ ಕಂದಾಯವನ್ನೇ ಮುಂದುವರೆಸಬೇಕು. ಜೊತೆಗೆ, ಈ ವರ್ಷ ಬಡ್ಡಿ ಇಲ್ಲದಂತೆ ಕಂದಾಯ ಪಾವತಿಸಲು ಅವಕಾಶ ನೀಡ ಬೇಕು ಎಂದು ಅವರು ಸರ್ಕಾರಕ್ಕೆ ಸಲ್ಲಿಸಿ ರುವ ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಕೊರೊನಾ ಕಾರಣ ಆಗಿದ್ದ ಲಾಕ್ ಡೌನ್ ಪರಿಣಾಮದಿಂದಾಗಿ ಎರಡು ತಿಂಗಳ ಕಾಲ ಜನ ಜೀವನ ಸಂಪೂರ್ಣ ಅಸ್ವಸ್ಥಗೊಂಡಿತ್ತು. ಇದರಿಂದ ಕೆಲಸ ಕಾರ್ಯಗಳು, ವ್ಯಾಪಾರೋದ್ಯಮವು ನಿಂತು ಹೋಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸು ವಂತಾಗಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹೆಚ್ಚಿಸಿರುವ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಭರಿಸುವುದು ತುಂಬಾ ಕಷ್ಟಕರವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರಗಳನ್ನು ಕೆಲವರಿಗೆ ಮಾತ್ರ ಘೋಷಿಸಿವೆ. ಆದಾಗ್ಯೂ ಪರಿಷ್ಕೃತ ತೆರಿಗೆಯನ್ನು ಪಾವತಿಸುವಂತೆ ಸರ್ಕಾರ ಆದೇಶಿಸಿರುವುದು ಸೂಕ್ತವಲ್ಲ. ಸಂಸ್ಥೆಯ ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಜಂಟಿ ಕಾರ್ಯದರ್ಶಿ ಕಿರುವಾಡಿ ವಿ. ಸೋಮಶೇಖರ್, ಖಜಾಂಚಿ ಟಿ.ಎಸ್.ಜಯರುದ್ರೇಶ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಅನೇಕ ಕಟ್ಟಡಗಳ ಮಾಲೀಕರು ಬಾಡಿಗೆದಾರರಿಂದ ಬಾಡಿಗೆಯಲ್ಲಿ ರಿಯಾಯಿತಿ ನೀಡಿ ಬಾಡಿಗೆ ಹಣ ಪಡೆದಿರುವ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಪಾಲಿಕೆಯು ಕಂದಾಯವನ್ನು ಹೆಚ್ಚಿಸಿರು ವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್ಚಿಸಿರುವ ಕಂದಾಯ ವನ್ನು ರದ್ದುಪಡಿಸಿ, ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಹಳೇ ಕಂದಾಯವನ್ನೇ ಮುಂದುವರೆಸುವುದರ ಮೂಲಕ ಸಾರ್ವ ಜನಿಕರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಂದಾಯ ವಸೂಲಾತಿಯಿಂದಲೇ ಊರಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸ ಲಾಗುತ್ತದೆ. ಈ ವಿಚಾರವನ್ನು ಗಮನದ ಲ್ಲಿರಿಸಿಕೊಂಡಂತೆ, ಲಾಕ್ ಡೌನ್ ನಿಂದ ಆಗಿರುವ ಪರಿಸ್ಥಿತಿಯನ್ನೂ ಅವಲೋಕಿಸುವುದು ಅಷ್ಟೇ ಅಗತ್ಯ. ಕಾರಣ, ನಾಗರಿಕರ ಜೀವನದ ಹಿತವನ್ನು ಗಮನದಲ್ಲಿಟ್ಟು ಕೊಂಡು ಕಂದಾಯ ಹೆಚ್ಚಳವನ್ನು ರದ್ದು ಪಡಿಸುವಂತೆ ಅವರು ಕೇಳಿಕೊಂಡಿದ್ದಾರೆ.