ಜಿಲ್ಲೆಯ ಎಂಟು ಶಾಸಕರು ಯಾರೊಂದಿಗೂ ಹೋಗಲ್ಲ

ಜಿಲ್ಲೆಯ ಎಂಟು ಶಾಸಕರು ಯಾರೊಂದಿಗೂ ಹೋಗಲ್ಲ - Janathavaniದಾವಣಗೆರೆ, ಜೂ. 1- ಜಿಲ್ಲೆಯ ಬಿಜೆಪಿಯ ಎಂಟೂ ಜನ ಶಾಸಕರೂ ಒಗ್ಗಟ್ಟಾಗಿಯೇ ಇದ್ದೇವೆ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಯಾರೊಂದಿಗೂ ನಾವು ಹೋಗುವ ಪ್ರಮೇಯವೇ ಇಲ್ಲ ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟದ ಹಿನ್ನೆಲೆಯಲ್ಲಿ ನಗರದ ತಮ್ಮ ನಿವಾಸದಲ್ಲಿ ನಿನ್ನೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜನಹಳ್ಳಿ ವಾಲ್ಮೀಕಿ ಶ್ರೀಗಳ ಆಣೆಗೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಯಾರ ಜೊತೆಗೂ ನಾನು ಹೋಗುವುದಿಲ್ಲ. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದು ಸ್ಪಷ್ಟ ನಿಲುವು ತಿಳಿಸಿದರು.

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಸಣ್ಣ ಪುಟ್ಟ ವ್ಯತ್ಯಾಸಗ ಳಿರಬಹುದು. ಅದನ್ನು ಪಕ್ಷದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪ ಸರಿಪಡಿಸಲಿದ್ದಾರೆ. 

ಕೊರೊನಾ ಸಂಕಷ್ಟದ ಪರಿಸ್ಥಿತಿ ಯಲ್ಲಿ ಯಾರಾದರೂ ರಾಜಕೀಯ ಮಾಡಿದರೆ ನಾಡಿನ ಜನತೆ ಕ್ಯಾಕರಿಸಿ ಉಗಿಯುತ್ತಾರಷ್ಟೆ ಎಂದು ಪ್ರಶ್ನೆಯೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಮೂರೂ ವರ್ಷ ಕಾಲ ಬಿಜೆಪಿಯೇ ರಾಜ್ಯ ದಲ್ಲಿ ಆಡಳಿತ ನೀಡಲಿದ್ದು, ಆ ನಂತರ ನಡೆಯುವ ವಿಧಾನಸಭೆ ಚುನಾ ವಣೆಯಲ್ಲೂ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪ ಸರ್ಕಾರದಲ್ಲಿ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಯಲ್ಲ. ಹೊರ ಜಿಲ್ಲೆಯವರ ಬದಲಿಗೆ, ನಮ್ಮ ಜಿಲ್ಲೆಯ ಯಾವುದೇ ಶಾಸಕ ರಿಗೆ ಮಂತ್ರಿ ಸ್ಥಾನ ಕೊಟ್ಟು, ಜಿಲ್ಲಾ ಉಸ್ತುವಾರಿ ಕೊಟ್ಟರೂ ಅದನ್ನು ಸಂ ತೋಷ ದಿಂದಲೇ ಸ್ವಾಗತಿಸುತ್ತೇನೆ ಎಂದು ಸ್ಪಷ್ಟ ಅನಿಸಿಕೆ ಹಂಚಿಕೊಂಡರು.

error: Content is protected !!