ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಂಜನೇಯ ಕಾಟನ್ ಮಿಲ್ ಬಳಿ ಪ್ರತಿಭಟನೆ

ದಾವಣಗೆರೆ, ಮೇ 27-  ಏಪ್ರಿಲ್ ತಿಂಗಳ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿ ಯುಸಿ ಸಂಯೋಜಿತ ಆಂಜನೇಯ ಮಿಲ್ಸ್ ಎಂಪ್ಲಾ ಯೀಸ್ ಯೂನಿಯನ್ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಮಿಲ್ ಎದುರು ನಿನ್ನೆ ಪ್ರತಿಭಟನೆ ನಡೆಸಲಾಯಿತು.

ನಂತರ ಬೇಡಿಕೆಯುಳ್ಳ ಮನವಿ ಪತ್ರವನ್ನು ಆಡಳಿತ ಮಂಡಳಿ ಪರವಾಗಿ ಕೈಗಾರಿಕಾ ವ್ಯವಸ್ಥಾಪಕ ತೋರಗಲ್ ಅವರಿಗೆ ಸಮಸ್ತ ಕಾರ್ಮಿಕರ ಪರವಾಗಿ ಮನವಿ ಸಲ್ಲಿಸಲಾಯಿತು.

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಮುಚ್ಚಿದ್ದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಇರಬೇಕಾ ಯಿತು. ಕಾರ್ಮಿಕರ ಜೀವನಕ್ಕೆ ತೊಂದರೆಯಾಗಬಾರ ದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರ್ಚ್, ಏಪ್ರಿಲ್ ತಿಂಗಳ ವೇತನ ನೀಡುವಂತೆ ಕೈಗಾರಿಕೆಯವರಿಗೆ ಆದೇಶಿಸಿವೆ. ಆದರೆ ಕಾರ್ಮಿಕರಿಗೆ ಮಾರ್ಚ್ ತಿಂಗಳ 6 ದಿನಗಳ ವೇತನ ಸಹಿತ ರಜೆ ನೀಡಿದ್ದು, ಏಪ್ರಿಲ್ ತಿಂಗಳ ವೇತನ ಕೊಟ್ಟಿಲ್ಲ. ಕೂಡಲೇ ಏಪ್ರಿಲ್ ತಿಂಗಳ ವೇತನ ನೀಡುವ ಮೂಲಕ ಅರೆ ಹೊಟ್ಟೆಯಲ್ಲಿರುವ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈಗಾಗಲೇ ಆಗಿರುವ ಒಪ್ಪಂದದಂತೆ 2020 ಏಪ್ರಿಲ್ 1ರಿಂದ ಹೆಚ್ಚುವರಿ ವೇತನವನ್ನು

ಆಡಳಿತ ಮಂಡಳಿಯವರು ಮಂಜೂರು ಮಾಡಬೇಕು. ಕಾರ್ಖಾನೆಯ ಕೆಲವು ಉತ್ಪಾದನಾ ವಿಭಾಗಗಳಲ್ಲಿ ಕಂಡುಬರುತ್ತಿರುವ ಶ್ರಮ ಭಾರವನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು. ಗೇಟ್ ಬದಲಿ ಅವಧಿಯಲ್ಲಿ ಕೆಲಸ ಮಾಡಿರುವ ಪರಿಣಿತ ಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು. ಮಹಿಳಾ ಕಾರ್ಮಿಕರ ದುಃಖ-ದುಮ್ಮಾನ ಆಲಿಸಲು ಮಹಿಳಾ ವ್ಯವಸ್ಥಾಪಕರನ್ನು ನೇಮಿಸಬೇಕು. ಕನಿಷ್ಟ 15 ಸಾವಿರ ರೂ. ಕನಿಷ್ಟ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಯೂನಿಯನ್ ಗೌರವಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಅಧ್ಯಕ್ಷ ಹೆಚ್.ಜಿ. ಉಮೇಶ್, ಪ್ರಧಾನ ಕಾರ್ಯದರ್ಶಿ ರಮೇಶ್, ಕಾರ್ಯದರ್ಶಿ ಎಸ್.ಜಯಪ್ಪ, ಕೆ.ಶಿವಕುಮಾರ, ಕೃಷ್ಣಮೂರ್ತಿ, 

ಶೇಷಮ್ಮ, ಬೈರಮ್ಮ, ಪುಷ್ಪ ಯಲ್ಲಪ್ಪ, ಅಮೃತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!