ದಾವಣಗೆರೆ, ಮೇ 27- ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಯಾಗಿದ್ದು, ಇವರೆಲ್ಲರೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ ಸಂಖ್ಯೆ 2412, 48 ವರ್ಷದ ಪುರುಷ, ರೋಗಿ ಸಂಖ್ಯೆ 2413, 21 ವರ್ಷದ ಮಹಿಳೆ, ರೋಗಿ ಸಂಖ್ಯೆ 2414, 18 ವರ್ಷದ ಯುವತಿ ಹಾಗೂ ರೋಗಿ ಸಂಖ್ಯೆ 2416, 20 ವರ್ಷದ ಪುರುಷ ಇವರು ರೋಗಿ ಸಂಖ್ಯೆ 1254 ಇವರ ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 2415 ಇವರು 46 ವರ್ಷದ ಪುರುಷ ಆಗಿದ್ದು ಇವರು ರೋಗಿ ಸಂಖ್ಯೆ 1373 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2417, 73 ವರ್ಷದ ಮಹಿಳೆ ಇವರು 1658 ಸಂಪರ್ಕಿತರಾಗಿದ್ದಾರೆ.