ಡಿಕೆಶಿಯದ್ದು ಜೇಬಿನಿಂದ ದುಡ್ಡು ಕೊಡುವ ಆಡಂಬರ: ಲೇವಡಿ

ದಾವಣಗೆರೆ, ಮೇ 27 – ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಲಸೆ ಕಾರ್ಮಿಕರಿಗಾಗಿ ಜೇಬಿನಿಂದ ದುಡ್ಡು ಕೊಡುವ ಆಡಂಬರ ಮಾಡುತ್ತಿ ದ್ದಾರೆ ಎಂದು ಕಂದಾಯ ಸಚಿವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದ ಯಡಿಯೂರಪ್ಪ ಸರ್ಕಾರ ಇದುವರೆಗೂ 2.5 ಲಕ್ಷ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ 40-50 ಕೋಟಿ ರೂ. ವೆಚ್ಚ ಮಾಡಿದೆ. ಕೇಂದ್ರದ ಮೋದಿ ಸರ್ಕಾರ ಇದುವರೆಗೂ 36 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ವಾಪಸ್ ಕಳಿಸಲು ವ್ಯವಸ್ಥೆ ಮಾಡಿದೆ. ವಿದೇಶದಿಂದ ಸಾವಿರಾರು ಜನರನ್ನು ಮರಳಿ ನಾಡಿಗೆ ಕರೆಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

ಈ ಎಲ್ಲ ಖರ್ಚು-ವೆಚ್ಚಗಳಿಗಾಗಿ ನಾವೇನೂ ಕಾಂಗ್ರೆಸ್ ಖಾತೆಯಿಂದ ಹಣ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ. ಕಾಂಗ್ರೆಸ್‌ನ ಕೆಲ ದೊಡ್ಡ ನಾಯಕರು, ಅಧ್ಯಕ್ಷರು (ಡಿ.ಕೆ. ಶಿವಕುಮಾರ್) ಮಾತೆತ್ತಿದರೆ ನನ್ನ ಜೇಬಿನಿಂದ ದುಡ್ಡು ಕೊಡುತ್ತೇನೆ ಎನ್ನುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಜನರನ್ನು ಕಳಿಸುವಾಗ ಅವರ ಕೈ ಜೇಬಿಗೆ ಹೋಗಲಿಲ್ಲ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಈಗ ನಾಲ್ಕು ಜನ ಅರಮನೆ ಮೈದಾನದಲ್ಲಿ ನಿಂತಿದ್ದರೆ, ಆ ನಾಲ್ಕು ಜನರಿಗೆ ದುಡ್ಡು ಕೊಡುತ್ತೇನೆ ಎಂದು ಹೇಳಿದರೆ ಅದು ಆಡಂಬರವಾಗುತ್ತದೆ ಹಾಗೂ ಹುಡುಗಾಟಿಕೆ ಎನಿಸುತ್ತದೆ. ಹಿಂದೆ ಅವರು ಕೊಟ್ಟ ಚೆಕ್ಕನ್ನೇ ಕೆ.ಎಸ್.ಆರ್.ಟಿ.ಸಿ. ಪಡೆದುಕೊಂ ಡಿಲ್ಲ. ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರವೇ ಚೆಕ್ ನೀಡಲು ಅಧಿಕಾರವಿದೆ. ಅದಕ್ಕೂ ಮುಂಚೆಯೇ ಚೆಕ್ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಮಾತೆತ್ತಿದರೆ ಚೆಕ್ ಕ್ಯಾಷ್ ಎನ್ನುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಒಳ್ಳೆಯ ಕೆಲಸ ಮಾಡುವುದಾದರೆ ಮಾಡಿ. ನಮ್ಮ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸುವ ಹಾಗೂ ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಕರೆಸುವ ಮತ್ತು ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಮೊದಲಿಗನಾಗಿದೆ ಎಂದು ಸಚಿವ ಅಶೋಕ್ ಹೇಳಿದರು.

ಬೆಂಗಳೂರು ಇಡೀ ದೇಶದಲ್ಲಿ ಕೊರೊನಾ ನಿಯಂತ್ರಣದ ಎಲ್ಲ ವಿಷಯದಲ್ಲಿ ನಂ.1 ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಮಂತ್ರಿಮಂಡಲ ಈ ಸಾಧನೆ ಮಾಡಿದೆ. ಇಡೀ ದೇಶ ಮೆಚ್ಚುತ್ತಿರುವಾಗ ಕಾಂಗ್ರೆಸ್ ಟೀಕಿಸಿದರೆ ಯಾರೂ ಅದಕ್ಕೆ ಬೆಲೆ ಕೊಡುವುದಿಲ್ಲ ಎಂದವರು ತಿಳಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಸರಿಯಾಗಿ ವ್ಯವಸ್ಥೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ, ಕಾಂಗ್ರೆಸ್ ರಾಜ್ಯಭಾರ ಇರುವ ರಾಜ್ಯಗಳಲ್ಲಿ ಆಗಿರುವ ವೈಫಲ್ಯಗಳ ಬಗ್ಗೆ ಅವರು ಮೊದಲು ಬುದ್ಧಿ ಹೇಳಬೇಕು. ಆನಂತರ ಏನಾದರೂ ಉಳಿದಿದ್ದರೆ, ನಮಗೆ ಹೇಳಲಿ ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.

ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡದೇ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ದರೆ, ರಾಜ್ಯದಿಂದ ಕೊರೊನಾ ಬಡಿದೋಡಿಸಬ ಹುದು ಎಂದೂ ಅವರು ತಿಳಿಸಿದರು.

error: Content is protected !!