ಏರಿಕೆ ಕಂಡ ಚೇತರಿಕೆ

ನಗರದಲ್ಲಿ ಬಿಡುಗಡೆಯಾದವರ ಸಂಖ್ಯೆ 50, ಸಕ್ರಿಯ ಪ್ರಕರಣ 71

ಮೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಆರ್ಥಿಕತೆಯೂ ಚೇತರಿಕೆ

ದಾವಣಗೆರೆ, ಮೇ 25 – ಕೊರೊನಾ ವೈರಸ್‌ನ ಕಾರಣದಿಂದ ಹೇರಲಾಗಿದ್ದ ಕಠಿಣ ನಿರ್ಬಂಧಗಳಿಂದ ನಗರ ನಿಧಾನ ವಾಗಿ ಹೊರ ಬೀಳುತ್ತಿದೆ. ಸೋಮವಾರ ದಂದು ನಗರದಲ್ಲಿ ನಾಲ್ವರು ಕೊರೊನಾ ಸೋಂಕಿತರು ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ.

ಸೋಮವಾರದಂದು 630, 631, 755 ಹಾಗೂ 668 ಸಂಖ್ಯೆಯ ರೋಗಿ ಗಳು ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ. ಇವರಲ್ಲಿ ಮೂವರು ಜಾಲಿನಗರ ಹಾಗೂ ಒಬ್ಬರು ಬೇತೂರು ಕಂಟೈನ್‌ ಮೆಂಟ್ ವಲಯಕ್ಕೆ ಸೇರಿದವರಾಗಿದ್ದಾರೆ.

ಇದರೊಂದಿಗೆ ಮೇ ತಿಂಗಳಲ್ಲಿ ಸೋಂಕಿಗೆ ಸಿಲುಕಿ ಚೇತರಿಸಿಕೊಂಡವರ ಸಂಖ್ಯೆ 48 ಆಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೂ 50 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಂತಾಗಿದೆ.

ಕಳೆದ ಏಪ್ರಿಲ್ 29ರಿಂದ ನಗರದಲ್ಲಿ ಸಾಲು ಸಾಲಾಗಿ ಕೊರೊನಾ ಪ್ರಕರಣಗಳು ಕಂಡು ಬಂದಿದ್ದವು. ಮೇ 20ರಂದು ನಗರದಲ್ಲಿ ಸಕ್ರಿಯ ಕೊರೊನಾ ಪ್ರಕರಣ ಗಳ ಸಂಖ್ಯೆ 99ಕ್ಕೆ ಏರಿಕೆಯಾಗಿತ್ತು. ಆದರೆ, ಆನಂತರದಲ್ಲಿ ಕೊರೊನಾದಿಂದ ಚೇತರಿಸಿಕೊಂಡು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿದ್ದಾರೆ. ನಿನ್ನೆ ಭಾನುವಾರ ಒಂದೇ ದಿನ 18 ಜನ ಬಿಡುಗಡೆಯಾಗಿದ್ದರು. 

ಜನರು ತುಸು ನಿರಾಳ : ಕಳೆದ ತಿಂಗಳು ಏಪ್ರಿಲ್ 28ರವರೆಗೆ ಹಸಿರು ನಗರವಾಗಿದ್ದ ದಾವಣಗೆರೆ, ನಂತರದಲ್ಲಿ ಸಾಲು ಸಾಲಾಗಿ ಕೊರೊನಾ ಪ್ರಕರಣ ಗಳನ್ನು ಕಂಡು ಬೆಚ್ಚಿ ಬಿದ್ದಿತ್ತು. ಇದ ರಿಂದಾಗಿ ಲಾಕ್‌ಡೌನ್‌ ನಗರದಲ್ಲಿ ಮತ್ತಷ್ಟು ಬಿಗಿಯಾಗಿತ್ತು.

ಮೇ ಮಧ್ಯ ಭಾಗದಲ್ಲಿ ಅತ್ತ ಕೊರೊನಾ ಪ್ರಕರಣಗಳೂ ಹೆಚ್ಚಾಗಿ, ಇತ್ತ ಆರ್ಥಿಕತೆಯೂ ಮಂಕಾಗಿತ್ತು. ನಂತರ ದಲ್ಲಿ ಆರ್ಥಿಕತೆಯ ಬಾಗಿಲುಗಳು ಒಂದೊಂದಾಗಿ ತೆರೆಯಲಾರಂಭಿಸಿದರೆ, ಇತ್ತ ಕೊರೊನಾ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಕಡಿಮೆಯಾಗುತ್ತಿದೆ.

ಈ ನಡುವೆಯೇ, ರಾಜ್ಯ ಸರ್ಕಾರ ಕೊರೊನಾ ಪ್ರಕರಣಗಳು ಕಂಡುಬಂದಾಗ ಕಂಟೈನ್‌ಮೆಂಟ್‌ ವಲಯ ಹಾಗೂ ಬಫರ್‌ ವಲಯ ಮಾಡಬೇಕಾದ ಗಾತ್ರ ವನ್ನೂ ಸಹ ಗಣನೀಯವಾಗಿ ಕಡಿಮೆ ಮಾಡಿದೆ. ಇದೆಲ್ಲವೂ ನಗರದ ಜನತೆ ತುಸು ನಿರಾಳವಾಗುವಂತೆ ಮಾಡಿದೆ.

ವ್ಯಾಪಾರ, ಸಂಚಾರ : ಮೇ 13ರ ಬುಧವಾರದಿಂದ ನಗರದಲ್ಲಿ ವ್ಯಾಪಾರ – ವಹಿವಾಟಿಗೆ ಜಿಲ್ಲಾಡಳಿತದಿಂದ ಅನುಮತಿ ದೊರೆತಿತ್ತು.

ಮೇ 17ರಿಂದ ಆರಂಭವಾದ ನಾಲ್ಕನೇ ಲಾಕ್‌ಡೌನ್‌ ಅವಧಿಯಲ್ಲಿ ಬಸ್ ಹಾಗೂ ಆಟೋ ಸಂಚಾರವೂ ಆರಂಭವಾಗಿತ್ತು. ಆನಂತರ ದಲ್ಲಿ ಮೇ 22ರ ಶುಕ್ರವಾರದಿಂದ ನಗರದಲ್ಲಿ ರೈಲು ಸಂಚಾರವೂ ಆರಂಭವಾಗಿದೆ. ಒಟ್ಟಾರೆ ಕೊರೊನಾ ಪ್ರಕರಣಗಳ ಇಳಿಕೆ ಹಾಗೂ ಆರ್ಥಿಕತೆಗೆ ಅವಕಾಶ ನೀಡುತ್ತಿರುವು ದರಿಂದ ಜನರು ಮತ್ತೆ ಬದುಕು ಕಟ್ಟಿಕೊಳ್ಳುವತ್ತ ಮುಖ ಮಾಡುವಂತಾಗಿದೆ.

error: Content is protected !!