ಜಿಲ್ಲೆಯಲ್ಲೇ ಕಸಿ, ಸಸಿಗಳು ಸರ್ಕಾರಿ ದರದಲ್ಲಿ ಮಾರಾಟ

ದಾವಣಗೆರೆ, ಮೇ 23- ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ, ಸಸಿಗಳನ್ನು ಸಸ್ಯಾಭಿವೃದ್ಧಿ ಮಾಡಿ, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಕಸಿ, ಸಸಿಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆವರಗೊಳ್ಳ ತೋಟಗಾರಿಕೆ ಕ್ಷೇತ್ರದಲ್ಲಿ ನುಗ್ಗೆ, ತೆಂಗು, ಅಡಿಕೆ, ಅಲಂಕಾರಿಕ ಗಿಡಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ಸಂಖ್ಯೆ -7975479338ಕ್ಕೆ ಸಂಪರ್ಕಿಸುವುದು. ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗು, ಕರಿಬೇವು, ನಿಂಬೆ ಸಸಿಗಳು ಲಭ್ಯವಿದೆ. ಸಂಪರ್ಕಿಸಿ : ಮೊ: 9164408129. ಬೇಲಿಮಲ್ಲೂರಿನಲ್ಲಿ ಕರಿಬೇವು, ನಿಂಬೆ, ಕಾಳುಮೆಣಸು, ಅಡಿಕೆ ಸಸಿಗಳು ಲಭ್ಯವಿದೆ. ವಿವರಕ್ಕೆ ಸಂಪರ್ಕಿಸಿ : ಮೊ: 9731709133. ದಾವಣಗೆರೆಯಲ್ಲಿ ಅಡಿಕೆ, ಅಲಂಕಾರಿಕ ಸಸಿಗಳು, ಕರಿಬೇವು ಸಸಿಗಳು ಲಭ್ಯವಿದೆ. ಮೊ: 9964065115. ಗರಗ ತೋಟಗಾರಿಕೆ ಕ್ಷೇತ್ರ, ಚನ್ನಗಿರಿ ಕ್ಷೇತ್ರದಲ್ಲಿ ತೆಂಗು, ಮಾವು, ನುಗ್ಗೆ, ನಿಂಬೆ, ಅಡಿಕೆ ಸಸಿಗಳು ಲಭ್ಯವಿದೆ. ಮೊ: 9686375020 ಹಾಗೂ ಬುಳ್ಳಾಪುರದಲ್ಲಿ ತೆಂಗು ಸಸಿಗಳು ಲಭ್ಯವಿದೆ. ಮೊ: 9008900370 ಸಂಪರ್ಕಿಸಬಹುದು.

error: Content is protected !!