ಭ್ರಾತೃತ್ವದ ಶಕ್ತಿ ನಿಸಾರ್ ಅಹಮದ್ : ಪ್ರೊ. ಹಲಸೆ

ದಾವಣಗೆರೆ, ಮೇ 23- ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ. ಕೆ.ಎಸ್. ನಿಸಾರ್ ಅಹ್ಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ದಾವಣಗೆರೆ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ನಿಸಾರ್ ಅಹ್ಮದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹಲಸೆ ನುಡಿ ನಮನ ಸಲ್ಲಿಸಿದರು.

ನಿಸಾರ್ ಅಹ್ಮದ್ ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಮಹಾನ್ ಕವಿ. ಹೀಗಾಗಿಯೇ ಅವರು ಸಾಹಿತ್ಯದ ಮೂಲಕ ಎಲ್ಲರ ಮನೆ, ಮನವನ್ನು ತಲುಪಲು ಸಾಧ್ಯವಾಗಿದೆ. ದಾವಣಗೆರೆ ಕುರಿತು ವಿಶೇಷ ಕಾಳಜಿ ಇದ್ದ ನಿಸಾರ್, ದಾವಣಗೆರೆ ರಾಜ್ಯ ರಾಜಧಾನಿ ಆಗಬೇಕೆಂದು ಹಲವು ಬಾರಿ ಪ್ರತಿಪಾದಿಸಿದ್ದು, ಪಾಟೀಲ ಪುಟ್ಟಪ್ಪನವರ ಹೋರಾಟವನ್ನು ಬೆಂಬಲಿಸಿದ್ದರು. ಕುಲಸಚಿವ ಪ್ರೊ. ಬಸವರಾಜ ಬಣಕಾರ, ದೃಶ್ಯಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ವಲ್ಲೇಪುರೆ, ಡಾ. ಜಯರಾಜ್ ಚಿಕ್ಕಪಾಟೀಲ, ಶೋಭಾ ನಾಯಕ, ನಂದಕುಮಾರ ಉಪಸ್ಥಿತರಿದ್ದರು.

error: Content is protected !!