ಸಂಕಷ್ಟದಲ್ಲಿನ ಕಾಟನ್ ಮಿಲ್ ನಿವೃತ್ತ ಕಾರ್ಮಿಕರ ‌ನೆರವಿಗೆ ಒತ್ತಾಯ

ದಾವಣಗೆರೆ, ಮೇ 24- ಕೊರೊನಾ ಮಹಾಮಾರಿ ಕರಿನೆರಳು ಗಣೇಶ ಮಿಲ್ ನಿವೃತ್ತ ಕಾರ್ಮಿಕರು ಹಾಗೂ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮೇಲೂ ಬಿದ್ದಿದೆ. 

ರಾಜ್ಯದಲ್ಲಿ ಸುಮಾರು 15 ಲಕ್ಷದಷ್ಟು ನಿವೃತ್ತ ಕಾರ್ಮಿಕರಿದ್ದು, ಜಿಲ್ಲೆಯಲ್ಲಿ ಸುಮಾರು 10 ಸಾವಿರ ನಿವೃತ್ತ ಕಾರ್ಮಿಕರಿದ್ದಾರೆ. ಇದರಲ್ಲಿ ಗಣೇಶ್ ಕಾಟನ್ ಮಿಲ್ ಕಾರ್ಮಿಕರೇ ಹೆಚ್ಚು ಇದ್ದಾರೆ. ಇವರೆಲ್ಲಾ ಇದೀಗ 70 ವರ್ಷದ ಗಡಿಯಲ್ಲಿದ್ದು ಎಲ್ಲರೂ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. 800 ರಿಂದ 1 ಸಾವಿರ ಪಿಂಚಣಿಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರಪ್ಪ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರು, ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವಂತವರಿಗೆ ಸಹಾಯ ಮಾಡಿವೆ. ಅದರಂತೆ ನಿವೃತ್ತ ಕಾರ್ಮಿಕರ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಆರ್ಥಿಕ ಸಂಕಷ್ಟದ ಲ್ಲಿರುವ ನಮಗೆ ಸರ್ಕಾರ ಸಹಾಯ ಮಾಡಬೇಕು. 

ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಇತರೆ ಬಡ ವರ್ಗಕ್ಕೆ ಸಹಾಯ ಮಾಡಿವೆ. ಅದರಂತೆ ನಮಗೂ ಆರ್ಥಿಕ ಸಹಾಯ ಮಾಡಬೇ ಕೆಂದು ನಿವೃತ್ತ ಕಾರ್ಮಿಕರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ನಮಗೆ ಜೀವನ ಭದ್ರತೆ ಇಲ್ಲ. ಬಹುತೇಕ ಎಲ್ಲಾ ನಿವೃತ್ತ ಕಾರ್ಮಿಕರು ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಅವರ ಔಷಧಗಳಿಗೂ ಹಣವಿಲ್ಲದಂತಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿವೃತ್ತ ಕಾರ್ಮಿಕರ ಬಗ್ಗೆ ಗಮನ ಹರಿಸಿ ಅವರ ನೆರವಿಗೆ ಮುಂದಾಗಬೇಕೆಂದು ಚಂದ್ರಶೇಖರಪ್ಪ ಒತ್ತಾಯಿಸಿದ್ದಾರೆ.

error: Content is protected !!