ದಾವಣಗೆರೆ, ಮೇ 20- ಕೊರೊನಾದಿಂದ ಬಹಳಷ್ಟು ಮಂದಿ ಸಂಕಷ್ಟದಲ್ಲಿರುವವರು ಮಧ್ಯಮ ವರ್ಗದವರು, ವೃತ್ತಿ ನಿರತ ಜನಗಳಾಗಿದ್ದಾರೆ.
ಸರ್ಕಾರದ ಸವಲತ್ತುಗಳು ಕೆಳ ವರ್ಗದವರಿಗೆ ತಲುಪುತ್ತದೆ. ಮೇಲ್ವರ್ಗದವರಿಗೆ ಅವಶ್ಯಕತೆ ಇಲ್ಲ. ಆದರೆ `ಮಧ್ಯಮ ವರ್ಗದವರು ಕೇಳುವ ಹಾಗಿಲ್ಲ. ಅವರು ಕೊಡುವ ಹಾಗಿಲ್ಲ’ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲಿ ವಿಶೇಷವಾಗಿ ವಕೀಲರು ಲಾಕ್‌ಡೌನ್ ಆದಾಗಿನಿಂದ ನ್ಯಾಯಾಲ ಯಗಳೂ ಸಹ ಮುಚ್ಚಿರುತ್ತವೆ. ಇದರಿಂದ ಅನೇಕ ವಕೀಲರು ಸಹ ಇತರೆ ವರ್ಗದ ವರಂತೆ ಆರ್ಥಿಕ ಸಂಕಷ್ಟ ಎದರಿಸುತ್ತಿದ್ದಾರೆ. ರಾಜ್ಯವಾಗಲೀ, ಕೇಂದ್ರ ಸರ್ಕಾರವಾಗಲೀ, ವಕೀಲರಿಗೆ ಇದುವರೆಗೆ ಯಾವುದೇ ಸಹಾಯ ಹಸ್ತ ಚಾಚಿಲ್ಲ. ಆದರೂ ದಾವಣಗೆರೆ ಜಿಲ್ಲಾ ವಕೀಲರ ಸಂಘ ಈಗಾಗಲೇ ಸ್ಥಳೀಯವಾಗಿ ಕೆಲ ಹಿರಿಯ ವಕೀಲರ ಸಹಾಯದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕೆಲ ವಕೀಲರಿಗೆ ಸಹಾಯ ಮಾಡಿದೆ.
ವಕೀಲರು ತಮ್ಮ ಸ್ಥಿತಿಯನ್ನು ಎಲ್ಲೂ ಹೇಳಿಕೊಳ್ಳುವ ಆಗಿಲ್ಲ. ಯಾರೂ ಸಹಾಯ ಮಾಡುವ ಹಾಗಿಲ್ಲ ಎನ್ನುವಂತಾಗಿದೆ. ನ್ಯಾಯಾಲಯಗಳು ಸಹಜ ಸ್ಥಿತಿಯತ್ತ ಬರುವವರೆಗೂ ತೊಂದರೆ ಮುಂದುವರೆಯಲಿದೆ.
ರಾಜ್ಯ ಸರ್ಕಾರ ಕೂಡಲೇ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರ ಸಮುದಾಯಕ್ಕೆ ಆರ್ಥಿಕ ಸಹಾಯ ಘೋಷಿಸಬೇಕು ಹಾಗೂ ಜಿಲ್ಲಾಡಳಿತದಿಂದಲೂ ಇತ್ತ ಗಮನ ಹರಿಸಬೇಕು. ಈ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತರಬೇಕೆಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರೂ, ಬಿಜೆಪಿ ಮುಖಂಡರೂ ಆದ ಹೆಚ್. ದಿವಾಕರ್, ವಕೀಲರಾದ
ಎ.ಸಿ. ರಾಘವೇಂದ್ರ, ಎ.ಎಸ್. ಮಂಜುನಾಥ್ ವಿನಂತಿಸಿದ್ದಾರೆ.