ಜಾಗತಿಕ ಕೋವಿಡ್ ಚರ್ಚೆಯಲ್ಲಿ ಡಾ. ಕಲ್ಪನಾ ಉದಯ್

ಜಾಗತಿಕ ಕೋವಿಡ್ ಚರ್ಚೆಯಲ್ಲಿ ಡಾ. ಕಲ್ಪನಾ ಉದಯ್ - Janathavaniದಾವಣಗೆರೆ: ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ “ಅಕ್ಕಾ” AKKA ಜಾಗತಿಕ ಮಟ್ಟದಲ್ಲಿ ಕೋವಿಡ್ ಕುರಿತ ವೆಬ್ ಚರ್ಚಾ ಸರಣಿಯನ್ನು ಆರಂಭಿಸಿದೆ. ಇಂದಿನ ವೆಬ್ ಚರ್ಚಾ ಸರಣಿಯಲ್ಲಿ ರಾಜ್ಯದ ಉಪ ಮುಖ್ಯ ಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ ಮುಖ್ಯ ಅತಿಥಿಯಾಗಿ ಆರಂಭಿಕ ಭಾಷಣ ಮಾಡಲಿದ್ದಾರೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೆದ್ ಅಖ್ತರ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಅಮೆರಿಕಾದ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಮೂಲದ ವೈದ್ಯರು ಈ ವೆಬ್ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ. ಕನೆಕ್ಟಿಕಟ್ ನಲ್ಲಿರುವ ಆಂತಿರಕ ಔಷಧಗಳ ತಜ್ಞೆ ಡಾ. ಉಮಾ ರಾಣಿ ಮತ್ತು ಬಾರತೀಯ ಆರೋಗ್ಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯೆ, ಅರವಳಿಕೆ ತಜ್ಞೆ ಡಾ. ಶಾಲಿನಿ ನಲ್ವಾಡ್ ಇವರೊಂದಿಗೆ ನ್ಯೂಯಾರ್ಕ್ ನಲ್ಲಿರುವ ಹಿರಿಯ ವೈದ್ಯೆ ದಾವಣಗೆರೆ ಮೂಲದ ಡಾ. ಕಲ್ಪನಾ ಉದಯಶಂಕರ್ ಚರ್ಚೆಯಲ್ಲಿ ಬಾಗವಹಿಸಲಿದ್ದಾರೆ. ಸುಮಾರು ದಶಕಗಳಿಂದ ನ್ಯೂಯಾರ್ಕ್ ನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕಲ್ಪನಾ ಉದಯಶಂಕರ್ ಆಂತರಿಕ ಔಷಧ ಮತ್ತು ಮೂತ್ರಪಿಂಡಗಳ ತಜ್ಞೆ. ಅವರು ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಪತಿ ಡಾ. ಎಸ್.ಕೆ. ಉದಯಶಂಕರ್ ಜೊತೆ ಬಾಪೂಜಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.

ಜಾಗತಿಕ ಕೋವಿಡ್ ಚರ್ಚೆಯಲ್ಲಿ ಡಾ. ಕಲ್ಪನಾ ಉದಯ್ - Janathavaniಈಗ ನ್ಯೂಯಾರ್ಕಿನ ಬ್ರಾಂಕ್ಸ್ ಕೇರ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಅರವತ್ತೆರಡು ವರ್ಷದ ವೈದ್ಯೆ ನಿವೃತ್ತಿ ತೆಗೆದುಕೊಳ್ಳದೇ ಪ್ರತಿದಿನ ಹನ್ನೆರಡು ಗಂಟೆ ವಾರಕ್ಕೆ ಮೂರು ದಿನ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅಸ್ಪತ್ರೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳಿದ್ದು ಡಾ. ಕಲ್ಪನಾ ದಿನಕ್ಕೆ ಮೂವತ್ತರಿಂದ ನಲವತ್ತು ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಅಮೆರಿಕೆಯ ಕನ್ನಡ ಕೂಟಗಳ ಒಕ್ಕೂಟ ಆಯೋಜಿಸಿರುವ ವೆಬ್ ಚರ್ಚೆಯಲ್ಲಿ ಯುವ ವೈದ್ಯರೊಂದಿಗೆ ಪಾಲ್ಗೊಳ್ಳಲು  ಉತ್ಸುಕಳಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇದೇ ಭಾನುವಾರ ಸಂಜೆ ನಡೆಯಲಿರುವ ಈ ಕೋವಿಡ್ ಕುರಿತ ವೆಬ್ ಚರ್ಚೆಯ ನೇರ ಪ್ರಸಾರ ಅಕ್ಕಾ ಆನಲೈನ್ ಜಾಲತಾಣದಲ್ಲಿ www.akkaonline.org ಭಾರತೀಯ ಕಾಲಮಾನ ರಾತ್ರಿ ಒಂಬತ್ತು ಗಂಟೆಗೆ ನಡೆಯಲಿದ್ದು ಚರ್ಚೆಯನ್ನು ಡಾ. ಅನುರಾಧ ತಾವರಕೆರೆ ನಡೆಸಿಕೊಡಲಿದ್ದಾರೆ

error: Content is protected !!