ದಾವಣಗೆರೆ, ಮೇ 7 – ನಗರದ ಎ.ಪಿ.ಎಂ.ಸಿ.ಯಲ್ಲಿ ಗುರುವಾರದಂದು ಭತ್ತ, ಶೇಂಗ ಹಾಗೂ ಮೆಕ್ಕೆಜೋಳದ ಹೆಚ್ಚಿನ ಅವಕ ಬಂದಿದೆ ಎಂದು ಎ.ಪಿ.ಎಂ.ಸಿ. ಕಾರ್ಯದರ್ಶಿ ಜೆ. ಪ್ರಭು ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ನಗರದ ಎ.ಪಿ.ಎಂ.ಸಿ.ಗೆ ರೈತರು ಆಗಮಿಸುತ್ತಿಲ್ಲ ಎಂಬ ಕಳವಳಗಳ ನಡುವೆ, ಎಪಿಎಂಸಿಯಲ್ಲಿ ವಹಿವಾಟು ಹೆಚ್ಚಾಗಿದೆ.
ಗುರುವಾರದಂದು 6,925 ಕ್ವಿಂಟಾಲ್ ಭತ್ತ, 4,160 ಕ್ವಿಂಟಾಲ್ ಮೆಕ್ಕೆಜೋಳ ಹಾಗೂ 539 ಕ್ವಿಂಟಾಲ್ ಶೇಂಗಾದ ಅವಕ ಬಂದಿದೆ. ಈರುಳ್ಳಿಯ ಹರಾಜು ಎಂದಿನಂತೆ ನಡೆದಿದೆ ಎಂದು ಪ್ರಭು ತಿಳಿಸಿದ್ದಾರೆ.
ತರಕಾರಿ ಮಾರುಕಟ್ಟೆಯಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಖರೀದಿದಾರರು ಬಂದಿದ್ದು ಹೆಚ್ಚಿನ ವಹಿವಾಟು ನಡೆದಿದೆ ಎಂದವರು ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಇತರೆಡೆ ಶೇಂಗಾ ಮಾರುತ್ತಿದ್ದವರೂ ಸಹ ಈಗ ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಬಂದಿದ್ದಾರೆ ಎಂದಿರುವ ಪ್ರಭು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಹಿವಾಟು ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
November 23, 2024