ದಾವಣಗೆರೆ,ಮೇ 10- ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ಬಗ್ಗೆ ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದರೆನ್ನಲಾದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವರ್ತನೆಯನ್ನು ನಗರದ ಎಪಿಎಂಸಿ ಮಾಜಿ ಅಧ್ಯಕ್ಷರೂ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷರೂ ಆದ ತುಂಬಿಗೆರೆಯ ಬಿ.ಗಂಗಾಧರಪ್ಪ ಖಂಡಿಸಿದ್ದಾರೆ.
ಎಂ.ಎಲ್.ಎ. ಟಿಕೆಟ್ ಪಡೆಯುವಾಗ ಮತ್ತು ಜಿಲ್ಲಾ ಪಂಚಾಯ್ತಿ ವಿಜಿಲೆನ್ಸ್ ಸದಸ್ಯತ್ವ ಪಡೆಯುವ ಸಂದರ್ಭದಲ್ಲಿ ಸಿದ್ದೇಶ್ವರ ಅವರನ್ನು ಇಂದ್ರ – ಚಂದ್ರ ಅಂತ ಹೊಗಳಿದ ವಿರೂಪಾಕ್ಷಪ್ಪ ಅವರು ಅಧಿಕಾರ ಸಿಕ್ಕ ಮೇಲೆ ಸಂಸದರನ್ನು ಹೀಯಾಳಿಸುತ್ತಿರುವುದು ವಿಷಾದಕರ ಎಂದು ಜಿಲ್ಲಾ ಪಂಚಾಯ್ತಿ ವಿಜಿಲೆನ್ಸ್ ಸಮಿತಿ ಮಾಜಿ ಸದಸ್ಯರೂ ಆಗಿರುವ ಗಂಗಾಧರಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
January 13, 2025