ದಾವಣಗೆರೆ, ಮೇ 11- ಲಾಕ್ಡೌನ್ ಪರಿಣಾಮ ಮಾರಾಟ ಮಾಡಲು ಸಾಧ್ಯವಾಗದೇ ರೈತನೋರ್ವರು ಫಲಕ್ಕೆ ಬಂದಿದ್ದ ಎಲೆಕೋಸು ಬೆಳೆಯನ್ನು ಜಮೀನಿನಲ್ಲೇ ನಾಶ ಮಾಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರೊಬ್ಬರು ಜಮೀನು ಗುತ್ತಿಗೆ ಪಡೆದು 1 ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಇನ್ನೇನು ಬೆಳೆ ಕೈಗೆ ಬರುತ್ತಿದ್ದಂತೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ಪರಿಣಾಮವಾಗಿ ಬೇಡಿಕೆಯಿಲ್ಲದೇ ಕೈಗೆ ಬಂದ ಬೆಳೆಯನ್ನು ಟ್ರ್ಯಾಕ್ಟರ್ ನಿಂದ ನಾಶಪಡಿಸಿದ್ದಾರೆ. ಬಡ ರೈತನ ಪಾಲಿಗೆ ಕೊರೊನಾ ಕೈಸುಟ್ಟುಕೊಳ್ಳುವಂತೆ ಮಾಡಿದೆ.
January 26, 2025