ಜಗಳೂರು : ಮಾಜಿ ಶಾಸಕರು ಬಾಲಿಶ ಹೇಳಿಕೆ ನಿಲ್ಲಿಸಬೇಕು

ಜಗಳೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್‌.ಸಿ. ಮಹೇಶ್
ಜಗಳೂರು, ಮೇ 10- ಶಾಸಕ ಎಸ್‌.ವಿ. ರಾಮಚಂದ್ರ ಲಾಕ್‌ಡೌನ್‌ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ಹಳ್ಳಿ-ಹಳ್ಳಿಗೂ ತಿರುಗಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ ವಿರುದ್ಧ ರಾಜಕೀಯ ಪ್ರೇರಿತವಾದ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್‌.ಸಿ. ಮಹೇಶ್‌ ಆರೋಪಿಸಿದ್ದಾರೆ.
ಜಗಳೂರು : ಮಾಜಿ ಶಾಸಕರು ಬಾಲಿಶ ಹೇಳಿಕೆ ನಿಲ್ಲಿಸಬೇಕು - Janathavaniಶಾಸಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಲಾಕ್‌ಡೌನ್‌ ಆರಂಭದ ದಿನದಿಂದಲೂ ಸುಡು ಬಿಸಿಲಿನಲ್ಲಿ ಹಳ್ಳಿ-ಹಳ್ಳಿಗೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ. ತಮ್ಮ ಅನುದಾನದಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ವಿತರಿಸಿ ಜನರ ಸೇವೆ ಮಾಡಿದ್ದಾರೆ. ಇವರ ಜನಪರ ಕಾಳಜಿಯನ್ನು ಸಹಿಸದ ಮಾಜಿ ಶಾಸಕರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ.
ಶಾಸಕರನ್ನು `ಹೋಂ ಕ್ವಾರಂಟೈನ್‌’ ಮಾಡಿ ಎಂದು ಹೇಳಿರುವುದು ಬಾಲಿಶ, ಅಪ್ರಸ್ತುತ ಹೇಳಿಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಬೆಂಗಳೂರಿನಿಂದ ಹಲವಾರು ಸಾರಿ ಬಂದು ಸಭೆ ನಡೆಸುತ್ತಾರೆ. ಜಿಲ್ಲಾದ್ಯಂತ ತಿರುಗಾಡುತ್ತಿದ್ದಾರೆ. ಅವರನ್ನು ಹೋಂ ಕ್ವಾರಂಟೈನ್‌ ಮಾಡಲು ಸಾಧ್ಯವೇ? ಎಂದು ಮಹೇಶ್‌ ಪ್ರಶ್ನಿಸಿದ್ದಾರೆ. ಅವರು ಶಾಸಕರಾಗಿದ್ದಾಗ ಭದ್ರಾ ನೀರಾವರಿ ಯೋಜನೆ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಜಾರಿಗೆ ಪ್ರಾಮಾಣಿಕವಾಗಿ ಶ್ರಮಿಸದ ಅವರು ತಮ್ಮ ವೈಫಲ್ಯವನ್ನು ಮರೆಮಾಚಲು ಹಾಗೂ ಶಾಸಕ ರಾಮಚಂದ್ರ ಅವರ ಜನಪ್ರಿಯತೆಯನ್ನು ಸಹಿಸದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಆಡಳಿತ ವರ್ಗಕ್ಕೆ ಸಹಕಾರ ನೀಡಲಿ ಎಂದು ಮಹೇಶ್‌ ಮನವಿ ಮಾಡಿದ್ದಾರೆ.

error: Content is protected !!