ದಾವಣಗೆರೆ, ಮೇ 14- ಈಗಾಗಲೇ ಪ್ರಧಾನ ಮಂತ್ರಿಗಳು, ರಾಷ್ಟ್ರದ ಹಿರಿಯ ವೈದ್ಯಕೀಯ ಪರಿಣಿತರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಭಿಪ್ರಾಯ ಪಟ್ಟಂತೆ ಕೋವಿಡ್-19 ಸಾಂಕ್ರಾಮಿಕ ರೋಗದ ಜೊತೆಗೆ ನಗರ ಹಾಗೂ ರಾಜ್ಯ, ರಾಷ್ಟ್ರ, ಪ್ರಪಂಚ ಎಷ್ಟು ದಿನ ಹೋರಾಡಬೇಕು ಅನ್ನುವುದು ತಿಳಿದಿಲ್ಲ. ಈ ಸಾಂಕ್ರಾಮಿಕ ರೋಗದ ಜೊತೆಗೆ ದಿನನಿತ್ಯದ ಜೀವನ ಕಟ್ಟಿಕೊಳ್ಳೋದು ಅನಿವಾರ್ಯವಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
ಪರಿಣಿತರು ಹೇಳಿದಂತೆ ಮುನ್ನೆಚ್ಚರಿಕೆ ಯೊಂದಿಗೆ ಆರ್ಥಿಕ ವ್ಯವಸ್ಥೆಯನ್ನೂ ಕಾಪಾಡಿಕೊಳ್ಳು ವುದು ನಮ್ಮೆ ಲ್ಲರ ಜವಾಬ್ದಾರಿ ಆಗಿದೆ. ಇದನ್ನೆಲ್ಲಾ ಮನಗಂಡು, ಸಣ್ಣ-ಪುಟ್ಟ ಹಾಗೂ ಮಧ್ಯಮ ವ್ಯಾಪಾ ರಸ್ಥರ ಸ್ಥಿತಿ ಶೋಚನೀಯವಾಗಿರುವುದನ್ನು ಮನಗಂಡು ಜಿಲ್ಲಾಡಳಿತವು ರಾಜ್ಯದ ಇತರೆ ನಗರಗಳಲ್ಲಿ ಕೊಟ್ಟಂತೆ ಸರಳ ಮತ್ತು ಕೋವಿಡ್-19 ತಡೆಯಲು ಪರಿಣಾಮ ಕಾರಿ ನಡವ ಳಿಕೆಗಳನ್ನು ಅಳವಡಿಸಲು ಸೂಚಿಸದೇ, ಹಲವಾರು ಗೊಂದಲಗಳ ದಿಗ್ಬಂಧನಗಳನ್ನು ಸೂಚಿಸಿರುವುದು ಅಸ ಮರ್ಪಕ ಹಾಗೂ ಖಂಡನೀಯ ಎಂದವರು ತಿಳಿಸಿದ್ದಾರೆ.
ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಹಾಗೂ ಕೋವಿಡ್ ಸೋಂಕಿತರ ಜವಾಬ್ದಾರಿಯನ್ನು ಅಂಗಡಿ ಮಾಲೀಕರೇ ಹೊರ ಬೇಕೆಂಬ ನಿಯಮ ರೂಪಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಈ ನಿಯಮಗಳು ಬೃಹತ್ ನಗರಗಳಿಗೆ, ಬಹುಮಹಡಿ ಕಟ್ಟಡಗಳ ವಾಣಿಜ್ಯ ಕೇಂದ್ರಗಳಿಗೆ, 5 ಸಾವಿರ ಚದುರಡಿ ಮೇಲ್ಪಟ್ಟ ವ್ಯಾಪಾರ ವಹಿವಾಟುಗಳಿಗೆ ಅನ್ವಯಿಸಲಿ ಎಂದು ಒತ್ತಾಯಿಸಿದ್ದಾರೆ.
ಸಣ್ಣಪುಟ್ಟ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಇದನ್ನು ಅಳವಡಿಸಿಕೊಳ್ಳಲು ಕಷ್ಟದಾಯಕ. ಆದ್ದರಿಂದ ವ್ಯಾಪಾರ ಸ್ನೇಹಿ ನಿಬಂಧನೆಗಳನ್ನು ಅಳವಡಿಸುವಂತೆ ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.