ದಾವ ಣಗೆರೆ, ಮೇ 13- ನರೇಂದ್ರ ಮೋದಿ ಘೋಷಿಸಿದ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಅಭಿಯಾನದ ಆರ್ಥಿಕ ಪ್ಯಾಕೇಜ್ ಎಂ.ಎಸ್.ಎಂ.ಇ.ಗಳ ಹಾಗೂ ಕಾರ್ಮಿಕರ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಮಹಾನಗರ ಪಾಲಿಕೆ ಹಣಕಾಸು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಪರಿಣಾಮವಾಗಿ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಎಂ.ಎಸ್.ಎಂ.ಇ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು ನಲುಗಿ ಹೋಗಿವೆ. ಈ ಸಂದರ್ಭದಲ್ಲಿ ಪ್ರಧಾನಿಯವರ ಆರ್ಥಿಕ ಪ್ಯಾಕೇಜ್ ಅಶಾಭಾವನೆ ಮೂಡಿಸಿದೆ ಎಂದಿದ್ದಾರೆ.
ಆರ್ಥಿಕ ಮುಗ್ಗಟ್ಟಿನಲ್ಲಿದ್ದ 45 ಲಕ್ಷಕ್ಕೂ ಅಧಿಕ ಕಾರ್ಖಾನೆಗಳಿಗೆ ಮೂರು ಲಕ್ಷ ಕೋಟಿ ಆಧಾರ ರಹಿತ ನೆರವು ನೀಡಲು ಮುಂದಾಗಿದ್ದು, 72 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಸರ್ಕಾರವೇ 2,500 ಕೋಟಿ ನೆರವು ನೀಡಲಿದೆ ಎಂದು ಹೇಳಿದ್ದಾರೆ.
ಆತಂಕದ ವಾತಾವರಣದಲ್ಲಿದ್ದ ಕೈಗಾರಿಕಾ ಕ್ಷೇತ್ರ ಮತ್ತು ಕಾರ್ಮಿಕರು ಹಾಗೂ ಅವಲಂಬಿತ ಕುಟುಂಬಗಳಿಗೆ 6 ಲಕ್ಷ ಕೋಟಿಗಳ ಆರ್ಥಿಕ ಪ್ಯಾಕೇಜ್ ನೀಡಿದ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆೆ.