ದಾವಣಗೆರೆಯಲ್ಲಿ ಮತ್ತೆ 12 ಕೊರೊನಾ ಪ್ರಕರಣ

ದಾವಣಗೆರೆ, ಮೇ 12 – ಜಿಲ್ಲೆಯಲ್ಲಿ ಮಂಗಳವಾರ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಇವರಲ್ಲಿ ಆರು ಜನರು ಗುಜರಾತ್‌ನ ಅಹಮದಾ ಬಾದ್‌ನಿಂದ ಬಂದವ ರಾಗಿದ್ದರೆ, ಉಳಿದ ಆರು ಜನರು ಎಸ್‌ಪಿಎಸ್‌ ನಗರ ಹಾಗೂ ಜಾಲಿ ನಗರಗಳಲ್ಲಿ ಸೋಂಕಿತರ ಜೊತೆ ಸಂಪರ್ಕ ಹೊಂದಿದವ ರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.


ಸೋಂಕಿತರಲ್ಲಿ ಆರು ಜನ  ಅಹಮದಾ ಬಾದ್‌ನಿಂದ ಬಂದವರು,  ಉಳಿದ ಆರು ಜನ ಎಸ್‌ಪಿಎಸ್‌ ನಗರ ಹಾಗೂ ಜಾಲಿ ನಗರದ ಸೋಂಕಿತರ  ಸಂಪರ್ಕ ದಲ್ಲಿದ್ದವರು


ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ, ಅಹಮದಾ ಬಾದ್‌ನಿಂದ ಬಂದು ಈ ಹಿಂದೆ ಶಿವಮೊಗ್ಗಕ್ಕೆ ತೆರಳಿದ  ಗುಂಪಿನಲ್ಲಿದ್ದವರೇ ದಾವಣಗೆರೆ ಜಿಲ್ಲೆಗೂ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಮೇ 9ರಂದು ಬಂದಿದ್ದ ಇವರನ್ನು ಹೊನ್ನಾಳಿ ಹುಣಸಘಟ್ಟದಲ್ಲಿ ಇಳಿಯಲು ಬಿಡದೆ ನಗರದ ಆಸ್ಪತ್ರೆಗೆ ಕರೆ ತರಲಾ ಗಿತ್ತು. ಮೇ 10ರಂದು ಅವರ ಮಾದರಿ ಗಳನ್ನು ಪರೀಕ್ಷೆಗೆ ಕಳಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಉಳಿದಂತೆ ಎಸ್‌ಪಿಎಸ್‌ ನಗರದ ರೋಗಿ ಸಂಖ್ಯೆ 695 ರ ಸಂಪರ್ಕದಲ್ಲಿದ್ದ ಮೂವರು ಹಾಗೂ ಜಾಲಿನಗರದ ರೋಗಿ ಸಂಖ್ಯೆ 696 ಜೊತೆ ಸಂಪರ್ಕದಲ್ಲಿದ್ದ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಈ ಆರು ರೋಗಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಶೋಧ ನಡೆದಿದೆ ಎಂದು ಬೀಳಗಿ ಹೇಳಿದ್ದಾರೆ.

ಈ ಹಿಂದೆ ಸೋಂಕು ಪತ್ತೆಯಾದ ರೋಗಿ ಸಂಖ್ಯೆಗಳಾದ 850, 851 ಹಾಗೂ 852ರ ಪ್ರಾಥಮಿಕ ಸಂಪರ್ಕದಲ್ಲಿದ್ದ 29 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 58 ಜನರನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮಂಗಳವಾರದಂದು 134 ಪರೀಕ್ಷಾ ವರದಿಗಳು ನೆಗೆಟಿವ್ ಬಂದಿವೆ. ಇನ್ನೂ 461 ಮಾದರಿಗಳ ವರದಿ ಬರಬೇಕಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಚೇತರಿಕೆಯ ಹಾದಿ : 22 ಜನ ಸೋಂಕಿತರು ಈಗ 14 ದಿನಗಳನ್ನು ಪೂರೈಸಿದ್ದಾರೆ. ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ತ್ವರಿತವಾಗಿ ಪರೀಕ್ಷಾ ವರದಿ ಕಳಿಸುವಂತೆ ಕೇಳಲಾಗಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ತಿಳಿಸಿದ್ದಾರೆ.

ಈ ವರದಿ ಬಂದ 24 ಗಂಟೆಗಳ ನಂತರ ಮತ್ತೊಂದು ವರದಿ ಕಳಿಸಲಾಗುವುದು ಎಂದಿರುವ ಬೀಳಗಿ, ಈ ಹಿಂದೆ ಗುಂಪು ಗುಂಪಾಗಿ ಸೋಂಕಿತರು ಬಂದ ರೀತಿಯಲ್ಲೇ ಇನ್ನು ಮುಂದೆ ಗುಂಪು ಗುಂಪಾಗಿ ಚೇತರಿಸಿಕೊಂಡ ವರದಿಗಳೂ ಬರಲಿವೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

error: Content is protected !!