ದಾವಣಗೆರೆ, ಡಿ.23- ನಗರದ ಕೆ.ಬಿ. ಬಡಾವಣೆಯ 4ನೇ ಕ್ರಾಸ್‌ನ ಕೆಟಿಜೆ ಕಾಂಪೌಂಡ್‌ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು.
ದೇವಸ್ಥಾನದ ಮುಂದಿನ ರಸ್ತೆಯುದ್ದಕ್ಕೂ ಮಹಿಳೆಯರು ದೀಪಗಳನ್ನು ಹಚ್ಚಿ, ಭಕ್ತಿ ಭಾವ ಮೆರೆದರು. ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ಡೊಳ್ಳು, ತಮಟೆ ವಾದ್ಯಗಳ ಮೇಳ ಆಯೋಜನೆ ಮಾಡಲಾಗಿತ್ತು. ಯುವಕರು, ಪುಟಾಣಿಗಳು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.
ಕಾರ್ತಿಕೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ವಾಣಿ ಭೂಷಣ ಗೆಳೆಯರ ಬಳಗ, ಬನ್ನಿಕಾಳಮ್ಮ ಮಹಿಳಾ ಭಕ್ತ ವೃಂದ ಮತ್ತು ಎಂ. ಚಂದ್ರಕಾಂತಮ್ಮ, ಎಸ್.ಆರ್. ಮುರಿಗೆಪ್ಪ ಮಕ್ಕಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸಹ ಆಗಮಿಸಿ, ದೇವಿಯ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಶ್ರೀ ಬನ್ನಿ ಮಹಾಂಕಾಳಮ್ಮ ಮಹಿಳಾ ವೃಂದದ ಶ್ರೀಮತಿ ಗೀತಾ ಮಂಜುನಾಥ್ ಮತ್ತು ಸಂಗಡಿಗರು, ಶ್ರೀಮತಿ ಲೀಲಾ, ವಿರಾಟ್ ವಿನಯ್ ಮತ್ತು ಸ್ನೇಹಿತರು, ಬಿಜೆಪಿ ಮುಖಂಡರಾದ ಟಿಂಕರ್ ಮಂಜಣ್ಣ, ರಮೇಶ್ ಬಸಪ್ಪ, ಮಂಜುನಾಥ್ ಡೈಮಂಡ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಸುರೇಂದ್ರ ಮೋಯ್ಲಿ, ಅಜ್ಜಂಪುರ ಮೃತ್ಯುಂಜಯ, ಡೋಲಿ ಚಂದ್ರು, ದೇವಸ್ಥಾನಕ್ಕೆ ಅಲಂಕಾರ ಮಾಡಿದ ಪರಶುರಾಮ್, ಶ್ರೀನಿವಾಸ್, ವೀರೇಶ್ ಟೈಲರ್ ಮತ್ತಿತರರು ಪಾಲ್ಗೊಂಡಿದ್ದರು.
ಮೇಯರ್ ಎಸ್.ಟಿ. ವೀರೇಶ್ ಅವರ ಸಹಕಾರದೊಂದಿಗೆ ವಾಣಿ ಲ್ಯಾಂಡ್ ಲಿಂಕ್ಸ್ ಮಾಲೀಕ ವಾಣಿ ನಾಗಭೂಷಣ್ ನೇತೃತ್ವದಲ್ಲಿ ಈ ಕಾರ್ತಿಕೋತ್ಸವ ಆಯೋಜನೆ ಮಾಡಲಾಗಿತ್ತು.